Celebrations at the village in Bihar: 29 ವರ್ಷಗಳಿಂದ ಪೊಲೀಸ್ ಠಾಣೆಯೊಂದರಲ್ಲಿ ಬಂಧಿಯಾಗಿದ್ದ ಭಗವಾನ್ ಹನುಮಾನ್ ಕೊನೆಗೂ ಬಿಡುಗಡೆ!

Celebrations at the village in Bihar: 29 ವರ್ಷಗಳಿಂದ ಪೊಲೀಸ್ ಠಾಣೆಯೊಂದರಲ್ಲಿ ಬಂಧಿಯಾಗಿದ್ದ ಭಗವಾನ್ ಹನುಮಾನ್ ಕೊನೆಗೂ ಬಿಡುಗಡೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 30, 2023 | 1:34 PM

ವಿಗ್ರಹಗಳ ಬಿಡುಗಡೆಗೆ ಆದೇಶ ಹೊರಬಿದ್ದ ಬಳಿಕ ಗುಂಡಿ ಗ್ರಾಮದಲ್ಲಿ ಸಂಭ್ರಮವೋ ಸಂಭ್ರಮ! ಗ್ರಾಮದ ನಿವಾಸಿಗಳು ವಿಗ್ರಹಗಳ ಮೆರವಣಿಗೆ ಮಾಡಿ ಪೂಜೆ ಸಲ್ಲಿಸಿದರು.

ಭೋಜ್ಪುರ (ಬಿಹಾರ): ಕಳೆದ 29 ವರ್ಷಗಳಿಂದ ಜಿಲ್ಲೆಯ ಆರ್ಹಾ ಪಟ್ಟಣದ ಪೊಲೀಸ್ ಠಾಣೆಯೊಂದರಲ್ಲಿ ‘ಬಂಧಿಯಾಗಿದ್ದ’ ಭಗವಾನ್ ಹನುಮಾನ್ (Bhagwan Hanuman) ಮತ್ತು ಸಂತ ಬಾರ್ಬರ್ ಸ್ವಾಮಿಯವರ (Saint Barbar Swami) ವಿಗ್ರಹಗಳನ್ನು ಅಂತಿಮವಾಗಿ ಕೋರ್ಟೊಂದರ ಆದೇಶದ ಬಳಿಕ ‘ಬಿಡುಗಡೆ’ ಮಾಡಲಾಗಿದೆ. ಅಸಲು ಸಂಗತಿಯೇನೆಂದರೆ, 1994ರಲ್ಲಿ ಗುಂಡಿ ಹೆಸರಿನ ಗ್ರಾಮದಲ್ಲಿರುವ ಶ್ರೀರಂಗನಾಥ ಮಂದಿರದಿಂದ (Sri Ranganath temple) ಎರಡು ವಿಗ್ರಹಗಳನ್ನು ಕಳುವು ಮಾಡಲಾಗಿತ್ತು. ಠಾಣೆಯಲ್ಲಿ ಎಫ್ ಐ ಅರ್ ದಾಖಲಾದ ಬಳಿಕ ಪೊಲೀಸರು ತನಿಖೆ ಆರಂಭಿಸಿ ಪಕ್ಕದ ಹಳ್ಳಿಯೊಂದರಿಂದ ಅವುಗಳನ್ನು ಬರಾಮತ್ತು ಮಾಡಿಕೊಂಡಿದ್ದರು. ನಂತರ ವಿಗ್ರಹಗಳನ್ನು ಸ್ಥಳೀಯ ಪೊಲೀಸ್ ಠಾಣೆಯ ಸ್ಟ್ರಾಂಗ್ ರೂಮಲ್ಲಿ ಇಡಲಾಗಿತ್ತು.

ಅದಾದ ಮೇಲೆ ಹನುಮಾನ್ ಮತ್ತು ಸಂತ ಬಾರ್ಬರ್ ಸ್ವಾಮಿ ವಿಗ್ರಹಗಳನ್ನು ಪ್ರತಿಷ್ಠಾಪಿಸಬೇಕೆನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಗ್ರಾಮಗಳ ನಡುವೆ ತಗಾದೆ ಶುರುವಿಟ್ಟುಕೊಂಡು ಇಲ್ಲಿಯವರೆಗೆ ನಡೆಯಿತು. ಅಂತಿಮವಾಗಿ ಮಂಗಳವಾರ ಆರ್ಹಾದ ಸ್ಥಳೀಯ ಕೋರ್ಟ್ ವಿಗ್ರಹಗಳ ಬಿಡುಗಡೆಗೆ ಆದೇಶ ನೀಡಿದೆ.

ಇದನ್ನೂ ಓದಿ:  ಶಾಸಕ ಗೌರಿಶಂಕರ್ ಆಯ್ಕೆ ಅಸಿಂಧುಗೊಳಿಸಿ ಹೈಕೋರ್ಟ್‌ ಆದೇಶ, ಆದರೂ ಬೀಸುವ ದೊಣ್ಣೆಯಿಂದ ಪಾರು

ವಿಗ್ರಹಗಳ ಬಿಡುಗಡೆಗೆ ಆದೇಶ ಹೊರಬಿದ್ದ ಬಳಿಕ ಗುಂಡಿ ಗ್ರಾಮದಲ್ಲಿ ಸಂಭ್ರಮವೋ ಸಂಭ್ರಮ! ಗ್ರಾಮದ ನಿವಾಸಿಗಳು ವಿಗ್ರಹಗಳ ಮೆರವಣಿಗೆ ಮಾಡಿ ಪೂಜೆ ಸಲ್ಲಿಸಿದರು.

‘ಹಿಂದೆಂದೂ ಕಾಣದ ಸಂಭ್ರಮ ನಮ್ಮ ಗ್ರಾಮದಲ್ಲಿ ಮನೆ ಮಾಡಿದೆ. ರಾಮನವಮಿಯ ಸಂದರ್ಭದಲ್ಲಿ ನಮ್ಮ ದೇವರು ಹನುಮಾನ್ ಜೀ 32 ವರ್ಷಗಳ ನಂತರ ಗ್ರಾಮಕ್ಕೆ ವಾಪಸ್ಸಾಗಿರುವುದರಿಂದ ಇಡೀ ಊರಲ್ಲಿ ಉತ್ಸವದ ವಾತಾವರಣವಿದೆ. ದೇವರೇ ಊರಿಗೆ ಬಂದಿರುವಾಗ ನಾವು ಏನು ತಾನೆ ಹೇಳಲು ಸಾಧ್ಯ?’ ಎಂದು ಪೂರ್ವ ಗುಂಡಿ ಪಂಚಾಯತ್ ನ ಸರಪಂಚ್ ಕೃಷ್ಣ ಕುಮಾರ್ ಸಿಂಗ್ ಹೇಳುತ್ತಾರೆ.

ಇದನ್ನೂ ಓದಿ:  ಮದುವೆಯಾಗಲು ಒತ್ತಡವಿದೆಯೇ? ಇದು ನಿಮ್ಮ ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ತಿಳಿದುಕೊಳ್ಳಿ

‘ಊರಲ್ಲಿ ಸಂತೋಷ ಪಡದ ಒಬ್ಬೇಒಬ್ಬ ವ್ಯಕ್ತಿ ಸಿಗಲಾರ, ಪ್ರತಿಯೊಬ್ಬ ವ್ಯಕ್ತಿ ಅನಂದತುಂದಿಲನಾಗಿದ್ದಾನೆ, ಅವರ ಸಂತೋಷವನ್ನು ಪದಗಳಲ್ಲಿ ಬಣ್ಣಿಸುವುದು ಸಾಧ್ಯವಿಲ್ಲ,’ ಎಂದು ಕೃಷ್ಣಘರ್ ಓಪಿಯ ಎಸ್ ಹೆಚ್ ಓ ಬ್ರಿಜೇಶ್ ಕುಮಾರ್ ಹೇಳುತ್ತಾರೆ.

ಅತಿ ಶೀಘ್ರದಲ್ಲಿ ವಿಗ್ರಹಗಳನ್ನು ಶ್ರೀರಂಗನಾಥ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾಪಿಸಲಾಗುವುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ