Inexpressible Love: ಸಿದ್ದಗಂಗಾ ಮಠ ಆವರಣದಲ್ಲಿ ಹಸುವೊಂದು ಶ್ರೀಗಳನ್ನು ಕಂಡೊಡನೆ ಅವರಲ್ಲಿಗೆ ಓಡಿ ತೋರುವ ಪ್ರೀತಿ ಬೆರಗು ಮೂಡಿಸುತ್ತದೆ!

Inexpressible Love: ಸಿದ್ದಗಂಗಾ ಮಠ ಆವರಣದಲ್ಲಿ ಹಸುವೊಂದು ಶ್ರೀಗಳನ್ನು ಕಂಡೊಡನೆ ಅವರಲ್ಲಿಗೆ ಓಡಿ ತೋರುವ ಪ್ರೀತಿ ಬೆರಗು ಮೂಡಿಸುತ್ತದೆ!

ಅರುಣ್​ ಕುಮಾರ್​ ಬೆಳ್ಳಿ
|

Updated on:Mar 30, 2023 | 12:13 PM

ಸಿದ್ದಲಿಂಗ ಶ್ರೀಗಳು ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ನಮಿಸಿ ವಾಪಸ್ಸು ತಮ್ಮ ಕೊಠಡಿಯತ್ತ ತೆರಳುವಾಗ ಈ ಘಟನೆ ನಡೆದಿದೆ.

ತುಮಕೂರು: ಪ್ರಾಣಿಗಳಿಗೆ ಪ್ರೀತಿ ತೋರಿದರೆ ನಮ್ಮ ಪ್ರೀತಿಯ ಎರಡರಷ್ಟು ಅವು ವಾಪಸ್ಸು ನೀಡುತ್ತವೆ. ನಮ್ಮ ದೇಶದಲ್ಲಿ ಆಕಳು (ಹಸು) (cow) ಪೂಜನೀಯ, ಅದನ್ನು ಗೋಮಾತೆ ಅಂತ ಆದರಿಸಲಾಗುತ್ತದೆ. ತುಮಕೂರಿನ ಸಿದ್ದಗಂಗಾ ಮಠದ ಆವರಣದಲ್ಲಿ ಹಸುವೊಂದು ಸಿದ್ದಲಿಂಗ ಶ್ರೀಗಳನ್ನು (Sri Siddalinga Swamiji) ಕಂಡೊಡನೆ ಅವರಲ್ಲಿಗೆ ಓಡುತ್ತಾ ಹೋಗಿ ಮೈದಡವಿಸಿಕೊಂಡ ಅತ್ಯಂತ ಅಪ್ಯಾಯಮಾನ ದೃಶ್ಯವನ್ನು ಆವರಣದಲ್ಲಿದ್ದ ಭಕ್ತರೊಬ್ಬರು ಮೊಬೈಲ್ ಕೆಮೆರಾದಲ್ಲಿ ಸೆರೆಹಿಡಿದಿದ್ದಾರೆ. ಸಿದ್ದಲಿಂಗ ಶ್ರೀಗಳು ಶ್ರೀ ಶಿವಕುಮಾರ ಸ್ವಾಮೀಜಿಗಳ (Sri Shivakumara Swamiji) ಗದ್ದುಗೆಗೆ ನಮಿಸಿ ವಾಪಸ್ಸು ತಮ್ಮ ಕೊಠಡಿಯತ್ತ ತೆರಳುವಾಗ ಈ ಘಟನೆ ನಡೆದಿದೆ. ಹಸುಗೆ ಶೀಗಳೆಡೆ ಇರುವ ಪ್ರೀತಿ ಬೆರಗು ಮೂಡಿಸುತ್ತದೆ. ಶ್ರೀಗಳ ಸುತ್ತಮುತ್ತ ಜನರಿದ್ದರೂ ಅದು ಓಡಿ ಅವರ ಪಕ್ಕವೇ ನಿಂತುಕೊಳ್ಳುವುದು ಅನಿರ್ವಚನೀಯ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Published on: Mar 30, 2023 12:13 PM