Chanting of Hanuman Chalisa: ಹನುಮಾನ್ ಚಾಲೀಸಾ ಪಠಿಸುವುದರಿಂದಾಗುವ ಪ್ರಯೋಜನಗಳೇನು?

ಹನುಮಂತನನ್ನು ಸ್ಮರಿಸುವ ಮತ್ತು ಸ್ತುತಿಸುವ 40 ಪದ್ಯಗಳ ಭಕ್ತಿಗೀತೆಯೇ ಹನುಮಾನ್ ಚಾಲೀಸಾ. ಸಂತ ತುಳಸಿದಾಸರು ಮೊಘಲ್ ಚಕ್ರವರ್ತಿ ಜೌರಂಗಜೇಬನ ಸೆರೆವಾಸದ ಸಮಯದಲ್ಲಿ ಇದನ್ನು ಬರೆದಿದ್ದರು.

Chanting of Hanuman Chalisa: ಹನುಮಾನ್ ಚಾಲೀಸಾ ಪಠಿಸುವುದರಿಂದಾಗುವ ಪ್ರಯೋಜನಗಳೇನು?
ವೀರಾಂಜನೇಯ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Feb 26, 2022 | 6:30 AM

ಹಿಂದೂ ಪುರಾಣಗಳಲ್ಲಿ ಭಗವಾನ್ ಹನುಮಾನ್​ನನ್ನು(Lord Hanuman) ಸಂಕಟ ಮೋಚನ ಎಂದ ಕರೆಯಲಾಗುತ್ತೆ. ಜೀವನದಲ್ಲಿ ಎಲ್ಲಾ ಸಮಸ್ಯೆಗಳು ದೂರವಾಗಿ ಸುಖ, ಶಾಂತಿ ನೆಲೆಸಲು ಹನುಮಾನ್ ಚಾಲೀಸಾ(Hanuman Chalisa) ಪಠಣೆ ಮಾಡಬೇಕು. ಹನುಮಂತನನ್ನು ಸ್ಮರಿಸುವ ಮತ್ತು ಸ್ತುತಿಸುವ 40 ಪದ್ಯಗಳ ಭಕ್ತಿಗೀತೆಯೇ ಹನುಮಾನ್ ಚಾಲೀಸಾ. ಸಂತ ತುಳಸಿದಾಸರು ಮೊಘಲ್ ಚಕ್ರವರ್ತಿ ಜೌರಂಗಜೇಬನ ಸೆರೆವಾಸದ ಸಮಯದಲ್ಲಿ ಇದನ್ನು ಬರೆದಿದ್ದರು. ಸಂತ ತುಳಸಿದಾಸರು ಭಗವಾನ್ ರಾಮನ ಅತ್ಯಂತ ಉತ್ಕಟ ಭಕ್ತರಲ್ಲಿ ಒಬ್ಬರು ಎಂದು ಪ್ರಶಂಸಿಸಲಾಗುತ್ತದೆ. ಭಗವಾನ್ ಹನುಮಂತನಿಗೆ ಸಮರ್ಪಿತವಾದ ಅತ್ಯಂತ ಶಕ್ತಿಶಾಲಿ ಕಾವ್ಯಗಳಲ್ಲಿ ಒಂದಾದ ಹನುಮಾನ್ ಚಾಲೀಸಾ 16ನೇ ಶತಮಾನದಲ್ಲಿ ಬರೆಯಲಾಗಿದೆ. ಹಾಗಾದ್ರೆ ಬನ್ನಿ ಭಕ್ತರು ಈ ಹನುಮಾನ್ ಚಾಲೀಸಾವನ್ನು ಏಕೆ ಪಠಿಸುತ್ತಾರೆ ಮತ್ತು ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಆಗುವ ಪ್ರಯೋಜನಗಳನ್ನು ಇಲ್ಲಿ ತಿಳಿಯಿರಿ.

ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಆಗುವ ಪ್ರಯೋಜನಗಳು:

  1. ಭಗವಾನ್ ಹನುಮಂತನನ್ನು ಚಿರಂಜೀವಿ, ಅಮರ ಎನ್ನಲಾಗುತ್ತದೆ. ಆದ್ದರಿಂದ, ಹನುಮಾನ್ ಚಾಲೀಸಾವನ್ನು ಪ್ರಾಮಾಣಿಕ ಭಕ್ತಿ ಮತ್ತು ಸಮರ್ಪಣಾ ಭಾವದಿಂದ ಪಠಿಸುವುದರಿಂದ ಭಕ್ತರು ಹನುಮಂತನ ಕೃಪೆಗೆ ಪಾತ್ರರಾಗುತ್ತಾರೆ.
  2. ಶನಿ ಗ್ರಹದ ಅಧಿಪತಿ ಭಗವಾನ್ ಶನಿಯನ್ನು ಕಂಡರೆ ಇಡೀ ಬ್ರಹ್ಮಾಂಡವೇ ಹೆದರುತ್ತದೆ. ಆದ್ರೆ ಭಗವಾನ್ ಶನಿಗೆ ಹನುಮಾನ್ ಎಂದರೆ ಭಯ. ಹೀಗಾಗಿ ಹನುಮಾನ್ ಚಾಲೀಸಾ ಪಠಣೆಯಿಂದ ಶನಿ ದೋಷದಿಂದ ಮುಕ್ತರಾಗುತ್ತಾರೆ. ಅಲ್ಲದೆ ಸಾಡೇ ಸಾತಿ ಶನಿ ದೋಷದ ಪರಿಣಾಮ, ಕುಂಡಲಿಯಲ್ಲಿನ ಶನಿಯ ದುಷ್ಪರಿಣಾಮದಿಂದ ಪಾರಾಗಿ ಶಂತಿ ಸಮೃದ್ಧಿಗಾಗಿ ಶನಿವಾರದಂದು ಹನುಮಾನ್ ಚಾಲೀಸಾ ಪಠಿಸಬೇಕು.
  3. ಹನುಮಾನ್ ಚಾಲೀಸಾವನ್ನು ಪಠಿಸುವ ಮೂಲಕ, ಹನುಮಂತನಿಗೆ ಅತ್ಯಂತ ಪ್ರಿಯ ಆತ್ಮೀಯ ಸ್ನೇಹಿತ ಎಂದು ಪರಿಗಣಿಸುವ ಭಗವಾನ್ ರಾಮನ ಆಶೀರ್ವಾದವೂ ಸಹ ಸಿಗುತ್ತದೆ.
  4. ಹನುಮಾನ್ ಚಾಲೀಸಾವನ್ನು ಪಠಿಸುವ ಮೂಲಕ ಮಾನಸಿಕ ಒತ್ತಡ ಮತ್ತು ದೈಹಿಕ ಕಾಯಿಲೆಗಳನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಪಡೆಯಬಹುದು. ಹನುಮಂತನು ತನ್ನ ಭಕ್ತರ ರೋಗಗಳು, ನೋವು ಮತ್ತು ಸಂಕಟಗಳನ್ನು ದೂರ ಮಾಡಿ ರಕ್ಷಿಸುತ್ತಾನೆ.
  5. ಹನುಮಾನ್ ಚಾಲೀಸಾವನ್ನು ಪಠಿಸುವ ಮೂಲಕ ನಕಾರಾತ್ಮಕತೆ ಮತ್ತು ದುಷ್ಟಶಕ್ತಿಗಳನ್ನು ದೂರವಿಡಬಹುದು.
  6. ಹನುಮಾನ್ ಚಾಲೀಸಾವನ್ನು ನಿಯಮಿತವಾಗಿ ಪಠಿಸುವ ಮೂಲಕ ಗ್ರಹಿಕಾಶಕ್ತಿಯನ್ನು ಪಡೆಯಬಹುದು.
  7. ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಚಂಚಲ ಮನಸ್ಸು ಶಾಂತವಾಗುತ್ತದೆ.
  8. ಹನುಮಾನ್ ಚಾಲೀಸಾ ಪಠಿಸುವುದರಿಂದ ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳು ಹಾಗೂ ಈ ಜನ್ಮದಲ್ಲಿ ಮಾಡಿದ ಪಾಪಗಳು ನಾಶವಾಗುತ್ತವೆ.
  9. ಜೀವನದಲ್ಲಿನ ಅಡೆತಡೆಗಳು, ತೊಂದರೆಗಳು ನಿವಾರಣೆಯಾಗಲು ಹನುಮಾನ್ ಚಾಲೀಸಾ ಪಠಿಸಬೇಕು.
  10. ಸುರಕ್ಷಿತ ಪ್ರಯಾಣಕ್ಕೆ ಹಾಗೂ ಮನೋಕಾಮನೆಗಳ ಈಡೇರಿಕೆಗಾಗಿ ಹನುಮಾನ್ ಚಾಲೀಸಾ ಪಠಿಸಬೇಕು. ಇಲ್ಲವೇ ಕೇಳ ಬೇಕು. ಹಾಗೂ ಕುಟುಂಬದಲ್ಲಿ ಸಮಸ್ಯೆಗಳು ದೂರವಾಗಿ ಸುಖ, ಶಾಂತಿ, ಸಮೃದ್ಧಿ ನೆಲೆಸಲು ಹನುಮಾನ್ ಚಾಲೀಸಾ ಓದಬೇಕು.

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್