ಯಾರದೋ ತಪ್ಪಿನಿಂದಾಗಿ ಪ್ರೀತಂ ಗೌಡ ಗೆದ್ದಿದ್ದಾರೆ; ಬಂದಷ್ಟೇ ವೇಗದಲ್ಲಿ ಹೋಗುತ್ತಾರೆ ಬಿಡಿ- ಹೆಚ್‌ಡಿ ಕುಮಾರಸ್ವಾಮಿ ಹೇಳಿಕೆ

ಹಾಸನ: ಯಾರದೋ ತಪ್ಪಿನಿಂದಾಗಿ ಪ್ರೀತಂ ಗೌಡ ಗೆದ್ದಿದ್ದಾರೆ. ಶಾಸಕ ಪ್ರೀತಂಗೌಡ ಬಂದಷ್ಟೇ ವೇಗದಲ್ಲಿ ಹೋಗುತ್ತಾರೆ. ಅವರ ಬಗ್ಗೆ ನಾವು ಪ್ರಾಮುಖ್ಯತೆ ಕೊಡುವುದು ಬೇಡ ಎಂದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್‌ಡಿ ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದ್ದಾರೆ. ಪ್ರೀತಂ ಗೌಡ ಬಗ್ಗೆ ಮತ್ತೆ ಮಾತಾಡುತ್ತೇನೆ ಎಂದ ಕುಮಾರಸ್ವಾಮಿ ನಾವು ವಿಶ್ವಾಸಕ್ಕೆ ದ್ರೋಹ ಮಾಡೋರು ಅನ್ನೋದಾದರೆ ಪದೇ ಪದೆ ನಮ್ಮ ಮನೆ ಬಾಗಿಲಿಗೆ ಏಕೆ ಬರ್ತಾರೆ? ಎಂದು ಶಾಸಕ ಪ್ರೀತಂಗೌಡ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದರು. […]

ಯಾರದೋ ತಪ್ಪಿನಿಂದಾಗಿ ಪ್ರೀತಂ ಗೌಡ ಗೆದ್ದಿದ್ದಾರೆ; ಬಂದಷ್ಟೇ ವೇಗದಲ್ಲಿ ಹೋಗುತ್ತಾರೆ ಬಿಡಿ- ಹೆಚ್‌ಡಿ ಕುಮಾರಸ್ವಾಮಿ ಹೇಳಿಕೆ
ಶಾಸಕ ಪ್ರೀತಂ ಗೌಡ, ಹೆಚ್‌ಡಿ ಕುಮಾರಸ್ವಾಮಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Oct 09, 2021 | 1:38 PM

ಹಾಸನ: ಯಾರದೋ ತಪ್ಪಿನಿಂದಾಗಿ ಪ್ರೀತಂ ಗೌಡ ಗೆದ್ದಿದ್ದಾರೆ. ಶಾಸಕ ಪ್ರೀತಂಗೌಡ ಬಂದಷ್ಟೇ ವೇಗದಲ್ಲಿ ಹೋಗುತ್ತಾರೆ. ಅವರ ಬಗ್ಗೆ ನಾವು ಪ್ರಾಮುಖ್ಯತೆ ಕೊಡುವುದು ಬೇಡ ಎಂದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್‌ಡಿ ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದ್ದಾರೆ.

ಪ್ರೀತಂ ಗೌಡ ಬಗ್ಗೆ ಮತ್ತೆ ಮಾತಾಡುತ್ತೇನೆ ಎಂದ ಕುಮಾರಸ್ವಾಮಿ ನಾವು ವಿಶ್ವಾಸಕ್ಕೆ ದ್ರೋಹ ಮಾಡೋರು ಅನ್ನೋದಾದರೆ ಪದೇ ಪದೆ ನಮ್ಮ ಮನೆ ಬಾಗಿಲಿಗೆ ಏಕೆ ಬರ್ತಾರೆ? ಎಂದು ಶಾಸಕ ಪ್ರೀತಂಗೌಡ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದರು. ಇವರು ಯಾರೋ, ಯಾವುದೋ ತಪ್ಪಿನಿಂದ ಗೆದ್ದಿದ್ದಾರೆ. ಅವರು ಬಂದಷ್ಟೇ ವೇಗವಾಗಿ ಹೋಗ್ತಾರೆ. ಅವರ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಡಿ. ಆಕಸ್ಮಿಕವಾಗಿ ಏನೋ ಬಂದಿದಾರೆ ಅವರು, ಮುಂದೆ ಹೋಗ್ತಾರೆ ಬಿಡಿ ಎಂದು ಶಾಸಕ ಪ್ರೀತಂ ಗೌಡ ಹೇಳಿಕೆ ಬಗ್ಗೆ ಅವರು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.

ಜನರು ಕುತ್ತಿಗೆ ಪಟ್ಟಿಗೆ ಕೈಹಾಕುತ್ತಾರೆ: ಸಿದ್ದರಾಮಯ್ಯಗೆ ಕುಮಾರಸ್ವಾಮಿ ಎಚ್ಚರಿಕೆ ಸುಳ್ಳು ಹೇಳಿಕೊಂಡು ಬಹಳ ದಿನ ನಡೆಯೋಕಾಗಲ್ಲ. ಮುಂದಿನ ದಿನಗಳಲ್ಲಿ ಜನರು ಕುತ್ತಿಗೆ ಪಟ್ಟಿಗೆ ಕೈಹಾಕುತ್ತಾರೆ. ಸಿದ್ದರಾಮಯ್ಯನವರೇ ನೀವೀಗ ವಿಪಕ್ಷ ನಾಯಕರಿದ್ದೀರಿ ಎಂದು ಮಾಜಿ ಸಿ ಎಂ ಸಿದ್ದರಾಮಯ್ಯ ವಿರುದ್ಧ ಹೆಚ್‌ಡಿ ಕುಮಾರಸ್ವಾಮಿ ಇದೇ ವೇಳೆ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಜೊತೆಗಿನ ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ 14 ತಿಂಗಳು ನಾನು ಕೆಲಸ ಮಾಡುವಾಗ ಸಿಎಂ ಆಗಿ ಕೆಲಸ ಮಾಡಲು ಅಧಿಕಾರವೇ ಇರಲಿಲ್ಲ. ಕೇವಲ ರೈತರ ಸಾಲಾ ಮನ್ನಾ ಮಾಡಲು ಮಾತ್ರ ಹೇಗೊ ಮಾಡಿ ಮುಗಿಸಿದೆ ಎಂದು ಕುಮಾರಸ್ವಾಮಿ ಹೇಳಿದರು.

ಬಿಎಸ್‌ವೈ ಅಧಿಕಾರ ಕಳೆದುಕೊಳ್ಳಲು ಆರ್​ಎಸ್​ಎಸ್​​ ಕಾರಣ; ಆರ್​ಎಸ್​ಎಸ್ ಬಗ್ಗೆ ನಿಜ ಏನೆಂದು ಜನರೇ ಚರ್ಚೆ ಮಾಡಲಿ: ಹೆಚ್‌ಡಿಕೆ ಆರ್​ಎಸ್​ಎಸ್ ಕುರಿತಾದ ತಮ್ಮ ಹೇಳಿಕೆಗಳನ್ನು ಮುಂದಿಟ್ಟುಕೊಂಡು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಇಂದು ಮತ್ತೊಂದು ರಾಜಕೀಯ ಬಾಂಬ್​ ಸ್ಫೋಟಿಸಿದ್ದಾರೆ. ಬಿಎಸ್‌ ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳಲು RSS ಕಾರಣ. RSS ಬಗ್ಗೆ ನನ್ನ ಹೇಳಿಕೆ ಹಿಟ್ ಆ್ಯಂಡ್ ರನ್ ಅಲ್ಲ. ನಾನು ಸೂಕ್ತ ಮಾಹಿತಿ ಇಟ್ಟುಕೊಂಡೇ ಮಾತನಾಡಿದ್ದೇನೆ. ನಿಜ ಏನೆಂದು ರಾಜ್ಯದ ಜನರೇ ಚರ್ಚೆ ಮಾಡಲಿ ಎಂದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. RSS ಹೇಳಿಕೆ ಬಗ್ಗೆ ಹೆಚ್‌ಡಿಕೆ ಜೊತೆ ಮಾತನಾಡುತ್ತೇನೆ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಈ ಪ್ರತಿಕ್ರಿಯೆ ನೀಡಿದ್ದಾರೆ.

ಬಿಎಸ್‌ವೈ ಅವರ ಅಧಿಕಾರ ಹೋಗಲು RSS ನವರೇ ಕಾರಣ ಅಲ್ಲವೇ ಎಂದು ಪ್ರಶ್ನಿಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆ ವಿಚಾರದ ಬಗ್ಗೆ ಪಾಪ ಅವರು ಮಾತನಾಡ್ತರಂತಾ. RSS ಬಗ್ಗೆ ನಾನೇನು ಪ್ರಾರಂಭ ಮಾಡಿದ್ದೀನಿ ಅದು ಹಿಟ್ ಅಂಡ್ ರನ್ ಅಲ್ಲಾ. ಈ ಬಗ್ಗೆ ಸೂಕ್ತ ಮಾಹಿತಿ ಜೊತೆಗೆ ಮಾತಾಡಿದ್ದೀನಿ ಎಂದು ಯಡಿಯೂರಪ್ಪ ಹೇಳಿಕೆಗೆ ಮಾಜಿ ಸಿಎಂ HDK ಪ್ರತಿಕ್ರಿಯೆ ನೀಡಿದರು.

ಮಿನಿಮಮ್ ಬಜೆಟ್​ನಲ್ಲಿ 48 ಮೆಗಾಪಿಕ್ಸಲ್ ಕ್ಯಾಮರಾ ಇರುವ ಫೋನ್ |48 MP Smartphones|TV9 GADGETS WORLD

Published On - 1:30 pm, Sat, 9 October 21

ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್