Massive heart attack: ದೇವನಹಳ್ಳಿ ಮಾಜಿ ಶಾಸಕ ಕಾಂಗ್ರೆಸ್ ಪಕ್ಷದ ವೆಂಕಟಸ್ವಾಮಿ ಹೃದಯಾಘಾತದಿಂದ ನಿಧನ, ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು
ಟಿಕೆಟ್ ಸಿಗದ ಕಾರಣ ತೀವ್ರವಾಗಿ ನೊಂದುಕೊಂಡಿದ್ದರು. ಹೃದಯಾಘಾತಕ್ಕೆ ಅದು ಕೂಡ ಕಾರಣವಾಯಿತು ಅಂತ ಅವರ ಬೆಂಬಲಿಗರು ವಿಷಾದದಿಂದ ಹೇಳುತ್ತಿದ್ದಾರೆ.
ದೇವನಹಳ್ಳಿ: ಕ್ಷೇತ್ರದ ಮಾಜಿ ಶಾಸಕ ವೆಂಕಟಸ್ವಾಮಿ (Venkataswamy) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ, ಅವರಿಗೆ 53-ವರ್ಷ ವಯಸ್ಸಾಗಿತ್ತು. ಕುಟುಂಬ ಮೂಲಗಳ ಪ್ರಕಾರ ಅವರು ಕಳೆದ ಕೆಲ ವಾರಗಳಿಂದು ಪದೇಪದೆ ಎದೆನೋವಿನಿಂದ ಬಳಲುತ್ತಿದ್ದರು ಮತ್ತು ಎರಡು ಬಾರಿ ಚಿಕಿತ್ಸೆಯೂ ಕೊಡಿಸಲಾಗಿತ್ತು. ಕಳೆದ ರಾತ್ರಿ ಅವರು ತೀವ್ರ ಎದೆನೋವಿಗೊಳಗಾಗಿದ್ದರಿಂದ ಕೂಡಲೇ ಅವರನ್ನು ನಾರಾಯಣ ಹೃದಯಾಲಯದಲ್ಲಿ (Narayana Hrudayalaya) ದಾಖಲಿಸಲಾಗಿದೆ. ದುರದೃಷ್ಟಶಾತ್ ಅವರನ್ನು ಉಳಿಸುವುದು ಸಾಧ್ಯವಾಗಿಲ್ಲ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದ ವೆಂಕಟಸ್ವಾಮಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ (Devanahalli) ಮತ್ತೊಮ್ಮೆ ಸ್ಪರ್ಧಿಸಬಯಸಿದ್ದರು. ಆದರೆ ಟಿಕೆಟ್ ಸಿಗದ ಕಾರಣ ತೀವ್ರವಾಗಿ ನೊಂದುಕೊಂಡಿದ್ದರು. ಹೃದಯಾಘಾತಕ್ಕೆ ಅದು ಕೂಡ ಕಾರಣವಾಯಿತು ಅಂತ ಅವರ ಬೆಂಬಲಿಗರು ವಿಷಾದದಿಂದ ಹೇಳುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos