ಅಸ್ವಸ್ಥರಾಗಿರುವ ಕುಮಾರಸ್ವಾಮಿ ಗುಣಮುಖರಾಗಿ ಬರಲಿ, ಎಲ್ಲ ಆರೋಪಗಳಿಗೆ ಉತ್ತರಿಸುವೆ: ಡಿಕೆ ಸುರೇಶ್

Updated on: Mar 20, 2024 | 12:12 PM

ಕುಕ್ಕರ್ ಗಳನ್ನು ಹಂಚುವ ಅವಶ್ಯಕತೆ ತನಗಿಲ್ಲ್ಲ ಎಂದು ಹೇಳಿದ ಸುರೇಶ್, ಕೆಲವರು ಪ್ರಚಾರಕ್ಕಾಗಿ ಇಂಥ ಆರೋಪಗಳನ್ನು ಮಾಡುತ್ತಿರುತ್ತಾರೆ ಎಂದರು. ಕುಮಾರಸ್ವಾಮಿಯವರಿಗೆ ಆರೋಗ್ಯ ಸರಿಯಿಲ್ಲ, ಶಸ್ತ್ರಚಿಕಿತ್ಸೆಗಾಗಿ ತೆರಳಿದ್ದಾರೆ, ಆವರು ಬೇಗ ಗುಣಮುಖರಾಗಲಿ ಅಂತ ಹಾರೈಸುತ್ತೇನೆ ಎಂದ ಸುರೇಶ್ ಜೆಡಿಎಸ್ ನಾಯಕ ವಾಪಸ್ಸು ಬಂದ ಬಳಿಕ ರಾಜಕಾರಣದ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಎಂದರು.

ಬೆಂಗಳೂರು: ಮಂಗಳವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಜೆಡಿಎಸ್ ಪಕ್ಷದ ರಾಜ್ಯಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ (DK Suresh) ಎರಡು ದಿನಗಳ ಅವಧಿಯಲ್ಲಿ ಸುಮಾರು 4 ಲಕ್ಷ ಕುಕ್ಕರ್ ಗಳನ್ನು (cooker) ಹಂಚಿದ್ದಾರೆಂದು ಆರೋಪಿಸಿ ಪೋಟೋ ಮತ್ತು ವಿಡಿಯೋವನ್ನು ಬಿಡುಗಡೆ ಮಾಡಿದ್ದರು. ಇಂದು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸುರೇಶ್, ಕುಮಾರಸ್ವಾಮಿ ಮಾಡಿರುವ ಅರೋಪಗಳಿಗೆ ಉತ್ತರ ನೀಡಿದರು. ಕುಕ್ಕರ್ ಗಳನ್ನು ಹಂಚುವ ಅವಶ್ಯಕತೆ ತನಗಿಲ್ಲ್ಲ ಎಂದು ಹೇಳಿದ ಸುರೇಶ್, ಕೆಲವರು ಪ್ರಚಾರಕ್ಕಾಗಿ ಇಂಥ ಆರೋಪಗಳನ್ನು ಮಾಡುತ್ತಿರುತ್ತಾರೆ ಎಂದರು. ಕುಮಾರಸ್ವಾಮಿಯವರಿಗೆ ಆರೋಗ್ಯ ಸರಿಯಿಲ್ಲ, ಶಸ್ತ್ರಚಿಕಿತ್ಸೆಗಾಗಿ ತೆರಳಿದ್ದಾರೆ, ಆವರು ಬೇಗ ಗುಣಮುಖರಾಗಲಿ ಅಂತ ಹಾರೈಸುತ್ತೇನೆ ಎಂದ ಸುರೇಶ್ ಜೆಡಿಎಸ್ ನಾಯಕ ವಾಪಸ್ಸು ಬಂದ ಬಳಿಕ ರಾಜಕಾರಣದ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಎಂದರು. ರಾಜಕೀಯದಲ್ಲಿ ಎದುರಾಳಿಗಳು ಪ್ರಬಲವಾಗಿರಬೇಕು ಆಗಲೇ ರಾಜಕಾರಣ ಆಸಕ್ತಿಕರ ಮತ್ತು ಕುತೂಹಲಕಾಗಿಯಾರುತ್ತದೆ, ಅವರ ಎಲ್ಲ ಪ್ರಶ್ನೆಗಳಿಗೆ ಸ್ವಾಗತ, ಕುಮಾರಸ್ವಾಮಿಯವರು ಆರೋಗ್ಯವಂತರಾಗಿ ಬರಲಿ ಚರ್ಚೆ ಮಾಡೋಣ ಎಂದು ಸುರೇಶ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹೆಚ್ ಡಿ ಕುಮಾರಸ್ವಾಮಿ ಕುಕ್ಕರ್ ಬಾಂಬ್! ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಕೆ ಸುರೇಶ್ 4 ಲಕ್ಷಕ್ಕೂ ಹೆಚ್ಚು ಕುಕ್ಕರ್ ಹಂಚಿಕೆ?

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More