ರಾಜಕೀಯ ಬದುಕಿನಲ್ಲಿ ಕುಮಾರಣ್ಣ ಅನೇಕ ಸವಾಲುಗಳನ್ನು ಎದುರಿಸಿದ್ದಾರೆ: ನಿಖಿಲ್ ಕುಮಾರಸ್ವಾಮಿ
ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ತಮ್ಮ ಕುಟುಂಬದ ಚುನಾವಣಾ ಸೋಲುಗಳಿಗೆ ಬೇರೆಯವರನ್ನು ದೂಷಿಸುವುದು ಅಶ್ಚರ್ಯ ಹುಟ್ಟಿಸುತ್ತದೆ. ನಿಖಿಲ್ ಹೇಳೋದನ್ನು ಕೇಳಿ, 2019 ರಲ್ಲಿ ತುಮಕೂರುನಲ್ಲಿ ದೇವೇಗೌಡರು ಮಂಡ್ಯದಲ್ಲಿ ತಮ್ಮ ಸೋಲಿಗೆ ಶಿವಕುಮಾರ್ ಕಾರಣ ಎನ್ನುತ್ತಾರೆ! ಒಮ್ಮೆಯೂ ಗೆಲ್ಲದ ನಿಖಿಲ್ ರನ್ನು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಮಾಡುವ ತಯಾರಿ ನಡೆದಂತಿದೆ.
ರಾಮನಗರ: ಹೆಚ್ ಡಿ ಕುಮಾರಸ್ವಾಮಿಯವರು ತಮ್ಮ ಸುದೀರ್ಘ ರಾಜಕೀಯ ಬದುಕಿನಲ್ಲಿ ಸವಾಲುಗಳನ್ನು ಎದುರಿಸಿಕೊಂಡು ಬಂದಿದ್ದಾರೆ ಮತ್ತು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಮತ್ತು ಈಗ ಕೇಂದ್ರ ಸಚಿವರಾಗಿದ್ದಾರೆ, ಡಿಕೆ ಶಿವಕುಮಾರ್ ಸವಾಲುಗಳಿಗೆ ಅವರೇನೂ ಹೆದರಲ್ಲ ಎಂದು ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಜೆಡಿಎಸ್ ನಾಯಕರನ್ನು ಜೊತೆಯಲ್ಲಿಟ್ಟುಕೊಂಡು ಕತ್ತು ಕೊಯ್ದ ಶ್ರೇಯಸ್ಸು ಶಿವಕುಮಾರ್ ಅವರಿಗೆ ಸಲ್ಲುತ್ತದೆ. 2019 ರ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಅವರು ಯುವಕನಾಗಿದ್ದ ತಮ್ಮ ಕತ್ತು ಕೊಯ್ದರು, ತುಮಕೂರುನಲ್ಲಿ ಹೆಚ್ ಡಿ ದೇವೇಗೌಡರಿಗೆ ಮೋಸ ಮಾಡಿದರು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು. 2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದ ಅವರು ರಾಮನಗರದಲ್ಲಿ ಏನು ಮಾಡಿದರು ಅಂತ ನೆನಪಿಸಿಕೊಂಡರೆ ಚೆನ್ನಾಗಿರುತ್ತದೆ ಎಂದು ನಿಖಿಲ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಾಮನಗರವನ್ನು ಸೃಷ್ಟಿಸಿ ಬೆಳೆಸಿದ್ದೇ ದೇವೇಗೌಡರ ಕುಟುಂಬ ಎಂದ ನಿಖಿಲ್ ಕುಮಾರಸ್ವಾಮಿ!