ಬೆಂಗಳೂರಲ್ಲಿ ಹೆಚ್ಚಿದ ಪುಂಡರ ಹುಚ್ಚಾಟ; ಕಾರಿನ ಹಿಂಭಾಗ ನೇತಾಡಿ ಪ್ರಯಾಣ

ಬೆಂಗಳೂರಲ್ಲಿ ಹೆಚ್ಚಿದ ಪುಂಡರ ಹುಚ್ಚಾಟ; ಕಾರಿನ ಹಿಂಭಾಗ ನೇತಾಡಿ ಪ್ರಯಾಣ

ಕಿರಣ್ ಹನುಮಂತ್​ ಮಾದಾರ್
|

Updated on: Jul 16, 2024 | 6:01 PM

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ವಿಲೀಂಗ್​ ಪುಂಡರ ಹಾವಳಿ ಮೀತಿಮೀರಿತ್ತು. ಇದೀಗ ಕಾರಿನ ಹಿಂಭಾಗದಲ್ಲಿ ನೇತಾಡಿ ಪ್ರಯಾಣ ಮಾಡುವ ಮೂಲಕ ಹುಚ್ಚಾಟ ಮೆರೆದಿದ್ದಾರೆ. ನಿನ್ನೆ (ಸೋಮವಾರ) ರಾತ್ರಿ ಜಯನಗರದಿಂದ ಬನಶಂಕರಿ ತೆರಳುವ ಮಾರ್ಗದಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರ ಮೊಬೈಲ್​ನಲ್ಲಿ ದೃಶ್ಯ ಸೆರೆಯಾಗಿದೆ.

ಬೆಂಗಳೂರು, ಜು.16: ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ(Bengaluru) ಪುಂಡರ ಹಾವಳಿ ಮೀತಿಮಿರಿದ್ದು, ಕಾರಿನ ಹಿಂಭಾಗದಲ್ಲಿ ನೇತಾಡಿ ಪ್ರಯಾಣ ಮಾಡುವ ಮೂಲಕ ಹುಚ್ಚಾಟ ಮೆರೆದಿದ್ದಾರೆ. ಜಯನಗರದಿಂದ ಬನಶಂಕರಿ ತೆರಳುವ ಮಾರ್ಗದಲ್ಲಿ ನಿನ್ನೆ (ಸೋಮವಾರ) ರಾತ್ರಿ ಈ ಘಟನೆ ನಡೆದಿದೆ. ಟ್ರಾಫಿಕ್ ಪೊಲೀಸರ ಭಯವೇ ಇಲ್ಲದಂತೆ ಯುವಕರ ವರ್ತನೆಯೂ ಇತರೆ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿದೆ. ಈ ಘಟನೆಯ ವಿಡಿಯೋ ಸ್ಥಳೀಯರ ಮೊಬೈಲ್​ವೊಂದರಲ್ಲಿ ಸೆರೆಯಾಗಿದ್ದು, ಸವಾರರು ಕಿಡಿಕಾರಿದ್ದಾರೆ. ಇತ್ತೀಚೆಗೆ ಬೈಕ್​ ವಿಲೀಂಗ್ ಪುಂಡರ ಕಾಟಕ್ಕೆ ಸವಾರರು ಬೇಸತ್ತಿದ್ದರು. ಅದರ ಬೆನ್ನಲ್ಲೇ ಇದೀಗ ​ಕಾರಿನ ಹಿಂಭಾಗದಲ್ಲಿ ನೇತಾಡುವ ಮೂಲಕ ಇತರೆ ವಾಹನ ಸವಾರರಿಗೆ ತೊಂದರೆ ಉಂಟು ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ