ಹಾವೇರಿ: ವರದಾ ನದಿ ಉಕ್ಕಿ ಸೇತುವೆ ಮುಳುಗಡೆ, ಹರಿಯುವ ನದಿಯಲ್ಲೇ ವಾಹನ ಚಲಾಯಿಸಿ ಹುಚ್ಚಾಟ

ಉತ್ತರಕನ್ನಡ ಹಾಗೂ ಶಿರಸಿಯಲ್ಲಿ ಮಳೆರಾಯನ ಆರ್ಭಟ ಹೆಚ್ಚಾಗಿದ್ದು ವರದಾ ನದಿ ತುಂಬಿ ಹರಿಯುತ್ತಿದೆ. ಹೀಗಾಗಿ ಕಳಸೂರು ಸೇತುವೆ ಜಲಾವೃತಗೊಂಡಿದೆ. ಸೇತುವೆ ಮುಳುಗಿದ್ದರೂ ಬ್ರಿಡ್ಜ್​​ ಕಂ ಬ್ಯಾರೇಜ್​ ಮೇಲೆ ವಾಹನ ಚಲಾಯಿಸಿ ಸವಾರರು ಹುಚ್ಚಾಟ ಪ್ರದರ್ಶಿಸುತ್ತಿದ್ದಾರೆ.

ಹಾವೇರಿ: ವರದಾ ನದಿ ಉಕ್ಕಿ ಸೇತುವೆ ಮುಳುಗಡೆ, ಹರಿಯುವ ನದಿಯಲ್ಲೇ ವಾಹನ ಚಲಾಯಿಸಿ ಹುಚ್ಚಾಟ
| Updated By: ಆಯೇಷಾ ಬಾನು

Updated on: Jul 16, 2024 | 12:44 PM

ಹಾವೇರಿ, ಜುಲೈ.16: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಆಬ್ಬರ ಮುಂದುವರೆದಿದೆ (Karnataka Rain). ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಳಸೂರು ಗ್ರಾಮದ ಬಳಿ ವರದಾ ನದಿ (Varada River) ಉಕ್ಕಿ ಹರಿಯುತ್ತಿದ್ದು ಕಳಸೂರು ಸೇತುವೆ ಜಲಾವೃತಗೊಂಡಿದೆ. ಸೇತುವೆ ಜಲಾವೃತದಿಂದ ಐದು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಇಷ್ಟೆಲ್ಲ ಆದರೂ ಬ್ರಿಡ್ಜ್​​ ಕಂ ಬ್ಯಾರೇಜ್​ ಮೇಲೆ ವಾಹನ ಚಲಾಯಿಸಿ ಸವಾರರು ಹುಚ್ಚಾಟ ಪ್ರದರ್ಶಿಸುತ್ತಿದ್ದಾರೆ.

ಜೀವದ ಹಂಗು ತೊರೆದು ಬೈಕ್​ನಲ್ಲಿ ಬ್ರಿಡ್ಜ್​​ ಕಂ ಬ್ಯಾರೇಜ್​ ದಾಟುತ್ತಿದ್ದಾರೆ. ತುಂಬಿ ಹರಿಯುತ್ತಿರುವ ನದಿಯಲ್ಲೇ ವಾಹನವನ್ನು ಹಿಮ್ಮುಖವಾಗಿ ಚಲಾಯಿಸಿ ಹುಚ್ಚಾಟ ಮೆರೆಯುತ್ತಿದ್ದಾರೆ.

LPG ಟ್ಯಾಂಕರ್ ಮೇಲೆ ಕುಸಿದ ಗುಡ್ಡ.. 9 ಮಂದಿ ನಾಪತ್ತೆ!

ಸ್ವಲ್ಪ ರೆಸ್ಟ್​ ತೆಗೆದುಕೊಂಡು ಹೋಗೋಣ ಅಂತಾ ರಸ್ತೆ ಬದಿ LPG ಟ್ಯಾಂಕರ್, ಲಾರಿಯನ್ನ ನಿಲ್ಲಿಸಿದ್ರು. ಚಾಲಕ ಹಾಗೂ ಕ್ಲೀನರ್ ಟೀ ಕುಡಿಯುತ್ತಿದ್ರು. ಈ ವೇಳೆ ಬೃಹತ್ ಗುಡ್ಡ ಕುಸಿತದ ರಭಸಕ್ಕೆ ರಸ್ತೆ ಬದಿ ನಿಂತಿದ್ದ ಗ್ಯಾಸ್​ ಟ್ಯಾಂಕರ್ ನದಿಗೆ ಬಿದ್ದು ಕೊಚ್ಚಿಕೊಂಡು ಹೋಗಿದೆ. ಅಂಕೋಲಾದ ಶಿರೂರು ಬಳಿ ದೊಡ್ಡ ದುರಂತವೇ ನಡೆದೋಗಿದೆ. ಹೆದ್ದಾರಿ ಸಂಪೂರ್ಣ ಬಂದ್​ ಆಗಿದ್ದು, ಟ್ಯಾಂಕರ್ ಚಾಲಕ, ಕ್ಲೀನರ್ ಸೇರಿ ಒಂಬತ್ತು ಮಂದಿ ಸಾವನ್ನಪ್ಪಿರೋ ಶಂಕೆವ್ಯಕ್ತವಾಗಿದೆ. ಶೋಧ ನಡೆಸಲಾಗ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Follow us