ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಮದ್ಯ ಸೇವಿಸಿ ಸಮುದ್ರಕ್ಕಿಳಿದ ಜನ, ವ್ಹೀಲಿಂಗ್ ಮಾಡಿದ ಐವರ ಬಂಧನ

ಇದೀಗ ಎಲ್ಲೆಡೆ ಮಳೆ ಆಗುತ್ತಿದೆ. ಹೀಗಾಗಿ ನಿಸರ್ಗ ದೇವತೆ ಹಸಿರಿನಿಂದ ಕಂಗೊಳಿಸುತ್ತಿದ್ದಾಳೆ. ಪ್ರವಾಸಿಗರು ನಿಸರ್ಗ ಸೌಂದರ್ಯ ಸವಿಯಲು ಬರುತ್ತಿದ್ದಾರೆ. ಆದರೆ ಮತ್ತೆ ಕೆಲ ಜನರು ಮಾತ್ರ ಮೋಜುಮಸ್ತಿ ಹೆಸರಲ್ಲಿ ಹುಚ್ಚಾಟ ಮೆರೆದಿದ್ದಾರೆ. ಕೆಲ ಯುವಕರು ವೀಲ್ಹಿಂಗ್ ಮಾಡಿದ್ರೆ ಮತ್ತೆ ಕೆಲವರು ಮದ್ಯ ಸೇವಿಸಿ ಸಮುದ್ರಕ್ಕಿಳಿದಿದ್ದಾರೆ.

ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಮದ್ಯ ಸೇವಿಸಿ ಸಮುದ್ರಕ್ಕಿಳಿದ ಜನ, ವ್ಹೀಲಿಂಗ್ ಮಾಡಿದ ಐವರ ಬಂಧನ
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಮದ್ಯ ಸೇವಿಸಿ ಸಮುದ್ರಕ್ಕಿಳಿದ ಜನ, ವ್ಹೀಲಿಂಗ್ ಮಾಡಿದ ಐವರ ಬಂಧನ
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಗಂಗಾಧರ​ ಬ. ಸಾಬೋಜಿ

Updated on: Jul 15, 2024 | 8:20 PM

ಚಿಕ್ಕಮಗಳೂರು, ಜುಲೈ 15: ಜಿಲ್ಲೆಯ ಮೂಡಿಗೆರೆ ತಾಲೂಕಿನ ರಾಣಿಝರಿ ಫಾಲ್ಸ್ ಬಳಿ‌ ಬೈಕ್​ನಲ್ಲಿ ವೀಲ್ಹಿಂಗ್ (wheeling)​​ ಮಾಡಿ ಹುಚ್ಚಾಟ ಮೆರೆದಿದ್ದ ಐವರು ಯುವಕರನ್ನು (boys) ಬಾಳೂರು ಠಾಣೆ ಪೊಲೀಸಕರು ಬಂಧಿಸಿದ್ದಾರೆ. ಮಂಗಳೂರು ಮೂಲದ ಗಿರೀಶ್, ಗಣೇಶ್, ಗಣೇಶ್ ಭಂಡಾರಿ, ಪ್ರವೀಣ್​, ರೋಹಿತ್ ಬಂಧಿತರು. 4 ಬೈಕ್​ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ರಾಣಿಝರಿ ಫಾಲ್ಸ್ ರಸ್ತೆಯಲ್ಲಿ ಹುಚ್ಚಾಟ ಮೆರೆದು ಪ್ರವಾಸಿಗರಿಗೆ ಕಿರಿಕಿರಿ ಮಾಡಿದ್ದರು.

ಯುವಕರ ಬೈಕ್ ವೀಲ್ಹಿಂಗ್ ವಿಡಿಯೋ ವೈರಲ್ ಬೆನ್ನಲ್ಲೇ ಬಾಳೂರು ಪೊಲೀಸ್ ‌ಠಾಣೆಯಲ್ಲಿ ಐವರ ವಿರುದ್ಧ ಕಲಂ 281,292 ಬಿಎನ್​ಎಸ್ ಅಡಿ ಎಫ್​ಐಆರ್​ ದಾಖಲಿಸಲಾಗಿತ್ತು.

ಕಿರು ಜಲಪಾತದಲ್ಲಿ ಪ್ರವಾಸಿಗರ ಮೋಜುಮಸ್ತಿ: ಎಫ್​ಐಆರ್ ದಾಖಲು

ಕಾಫಿನಾಡಿನಲ್ಲಿ ಪ್ರವಾಸಿಗರ ಮೋಜುಮಸ್ತಿ ಮುಂದುವರೆದಿದೆ. ಮೂಡಿಗೆರೆ ತಾಲೂಕಿನ ಮೈದಾಡಿ ರಸ್ತೆಯಲ್ಲಿರುವ ಕಿರು ಜಲಪಾತದಲ್ಲಿ ಮೋಜುಮಸ್ತಿ ಮಾಡಿತ್ತಿದ್ದ ಮಂಗಳೂರು ಮೂಲದ 6 ಜನರ ವಿರುದ್ಧ ಕೂಡ ಎಫ್​ಐಆರ್​ ಹಾಕಲಾಗಿದೆ. ಅಪಾಯಕಾರಿ ಸ್ಥಳಗಳಿಗೆ ತೆರಳದಂತೆ ಪೊಲೀಸ್ ಇಲಾಖೆ ಮನವಿ ಮಾಡಿದ್ದರು ಪ್ರವಾಸಿಗರು ಸ್ಪಂದಿಸಿಲ್ಲ. ಹೀಗಾಗಿ ಎಫ್​ಐಆರ್​ ಹಾಕಲಾಗಿದೆ.

ಹೊಸಳ್ಳಿ ಬೆಟ್ಟದಲ್ಲಿ ಪ್ರವಾಸಿಗರು ಹುಚ್ಚಾಟ

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿರುವ ಇತಿಹಾಸ ಪ್ರಸಿದ್ದ ಹೊಸಳ್ಳಿ ಬೆಟ್ಟದಲ್ಲಿ ಪ್ರವಾಸಿಗರು ಹುಚ್ಚಾಟ ಮೆರೆದಿದ್ದಾರೆ. ಬೆಟ್ಟದ ಮೇಲೆ ವಾಹನಗಳ ಪ್ರವೇಶ ನಿಷೇಧವಿದ್ದರು ವಾಹನಗಳಲ್ಲಿ ತೆರಳಿ ಹುಚ್ಚಾಟವಾಡಿದ್ದಾರೆ.

ಇದನ್ನೂ ಓದಿ: ವಿಜಯನಗರ; ತುಂಗಾಭದ್ರ ಜಲಾಶಯದ ಹಿನ್ನೀರಿನಲ್ಲಿ ಪ್ರವಾಸಿಗರ ಹುಚ್ಚಾಟ, ವಿಡಿಯೋ ನೋಡಿ

ಅಕ್ರಮವಾಗಿ ಕೆಲ ಯುವಕರು ಪ್ರವೇಶ ಮಾಡಿದ್ದು, ಹಸಿರಿನಿಂದ ಕಂಗೊಳಿಸುತ್ತಿರುವ ಹೊಸಳ್ಳಿ ಬೆಟ್ಟದ ಮೇಲೆ ಮನಬಂದಂತೆ ವಾಹನಗಳ ಚಾಲನೆ ಮಾಡಿದ್ದಾರೆ. ಹಸಿರು ಹುಲ್ಲಿನ ಮೇಲೆ ವ್ಹೀಲಿಂಗ್​​ ಮಾಡಿದ್ದಾರೆ. ಹೊಸಳ್ಳಿ ಬೆಟ್ಟ ಹಾಳು ಮಾಡಿರುವವರ ವಿರುದ್ಧ ಸ್ಥಳೀಯರು ಹಾಗೂ ಪರಿಸರವಾದಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕಾರು, ಜೀಪ್‌ಗಳನ್ನು ಚಾಲನೆ ವಿಡಿಯೋ ಮಾಡಿರುವ ಯುವಕರು ಇನ್​ಸ್ಟಾಗ್ರಾಮ್​ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇಷ್ಟಾದರೂ ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮದ್ಯ ಸೇವಿಸಿ ಸಮುದ್ರಕ್ಕಿಳಿದ ಪ್ರವಾಸಿಗರು 

ಮದ್ಯ ಸೇವಿಸಿ ಸಮುದ್ರಕ್ಕಿಳಿದು ಪ್ರವಾಸಿಗರು ಹುಚ್ಚಾಟ ಮೆರೆದಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಕುಡ್ಲೆ ಬೀಚ್​ನಲ್ಲಿ ನಡೆದಿದೆ. ಮದ್ಯದ ಅಮಲಿನಲ್ಲಿ ಬೇಕಾಬಿಟ್ಟಿ ಸಮುದ್ರಕ್ಕಿಳಿದು ಜೀವಕ್ಕೆ ಕುತ್ತು ತರಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ನಂದಿಬೆಟ್ಟದಲ್ಲಿ 5 ಕಿಲೋ ಮೀಟರ್ ವರೆಗೂ ಫುಲ್ ಟ್ರಾಪಿಕ್ ಜಾಮ್, ವಿಡಿಯೋ ನೋಡಿ

ಸಮುದ್ರಕ್ಕೆ ಇಳಿಯಲು ನಿಷೇಧ ಹೇರಿದರೂ ಸಮುದ್ರಕ್ಕಿಳಿದು ಮೋಜು ಮಸ್ತಿ ಮಾಡಿದ್ದಾರೆ. ಲೈಫ್ ಗಾರ್ಡ್​​ರಿಂದ ಎಚ್ಚರಿಕೆ ನೀಡಿದರೂ ಪ್ರವಾಸಿಗರ ಹುಚ್ಚಾಟ ನಿಲ್ಲುತ್ತಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.