Loading video

ಕುಮಾರಸ್ವಾಮಿಗೆ ನನ್ನ ಕಂಡ್ರೆ ಲವ್ ಜಾಸ್ತಿ, ಅಪಾರ ಪ್ರೀತಿ; ಹಾಗಾಗೇ ಟಾರ್ಗೆಟ್ ಮಾಡ್ತಾರೆ: ಡಿಕೆ ಶಿವಕುಮಾರ್

Updated on: Jun 06, 2025 | 7:23 PM

ಯಾರನ್ನೂ ಉಳಿಸುವ ಉರುಳಿಸುವ ಕೆಲಸ ಸರ್ಕಾರ ಮಾಡಿಲ್ಲ, ಜನಸಾಮಾನ್ಯರ ಹಿತದೃಷ್ಟಿಯಿಂದ ಮುಖ್ಯಮಂತ್ರಿಯವರು ಕ್ಯಾಬಿನೆಟ್ ಒಪ್ಪಿಗೆ ಪಡೆದು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ, ಯಾವಾಗ ಏನು ಮಾಡಬೇಕು ಅನ್ನೋದು ನಮಗೆ ಬಿಟ್ಟಿದ್ದು, ಬೇರೆಯವರ ಟೀಕೆ ಟಿಪ್ಪಣಿಗಳನ್ನು ಕೇಳಿಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳುವ ಅಗತ್ಯ ನಮಗಿಲ್ಲ ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು, ಜೂನ್ 6: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಪರಸ್ಪರ ಅಪಹಾಸ್ಯ ಮಾಡಿಕೊಳ್ಳುತ್ತಿದ್ದಾರೆ. ನಿಮ್ಮನ್ನು ಯಾಕೆ ಕುಮಾರಸ್ವಾಮಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕೇಳಿದರೆ ಶಿವಕುಮಾರ್ ಲೇವಡಿ ಮಾಡುವ ಧ್ವನಿಯಲ್ಲಿ, ಅವರಿಗೆ ನನ್ನನ್ನು ಕಂಡರೆ ಅಪಾರ ಪ್ರೀತಿ, ಅತಿಯಾದ ಲವ್, ಹಾಗಾಗೇ ನನ್ನನ್ನು ಟಾರ್ಗೆಟ್ ಮಾಡುತ್ತಾರೆ ಎಂದು ಹೇಳಿದರು. ಕುಮಾರಸ್ವಾಮಿಯವರು ಬಿಜೆಪಿ ಜೊತೆ ಸೇರಿ ತಮ್ಮ ವಿರುದ್ಧ ಜಂಟಿ ಹೋರಾಟ ಮಾಡುತ್ತಾರಂತೆ ಅಂತ ಹೇಳಿದ್ದಕ್ಕೆ ಶಿವಕುಮಾರ್, ಅವರು ಒಂಟಿಯಾದರೂ ಮಾಡಲಿ, ಜಂಟಿಯಾದರೂ ಮಾಡಲಿ ಅಥವಾ ಇನ್ನೂ ಹತ್ತು ಜನ ಸೇರಿಸಿಕೊಂಡು ಹೋರಾಟ ಮಾಡಲಿ, ಯಾರು ಬೇಡ ಅಂತಾರೆ, ರಾಜೀನಾಮೆ ಕೋಡೋಣ, ಹಿಂದೆ ಯಾರ್ಯಾರು ರಾಜೀನಾಮೆ ಕೊಟ್ಟಿದ್ದಾರೆ ಅಂತ ನೋಡ್ಕೊಂಡು ರಾಜೀನಾಮೆ ಕೊಡೋಣ ಎಂದು ಹೇಳಿದರು.

ಇದನ್ನೂ ಓದಿ:  Bengaluru Stampede; ಸ್ಟೇಡಿಯಂ ಬಳಿ ಕಾಲ್ತುಳಿತದ ಘಟನೆ ಮಾಧ್ಯಮದ ಮೂಲಕ ಗೊತ್ತಾಗಿದ್ದು: ಡಿಕೆ ಶಿವಕುಮಾರ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ