‘ಕ್ವಾಟ್ಲೆ ಕಿಚನ್’ ಆರಂಭಕ್ಕೆ ದಿನಾಂಕ ನಿಗದಿ; ಅಡುಗೆ ಜೊತೆ ನಗುವಿನ ಊಟ
‘ಕ್ವಾಟ್ಲೆ ಕಿಚನ್’ ರಿಯಾಲಿಟಿ ಶೋ ಆರಂಭಕ್ಕೆ ದಿನ ಗಣನೆ ಆರಂಭ ಆಗಿದೆ. ಈ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ‘ಬಾಯ್ಸ್ vs ಗರ್ಲ್ಸ್’ ಹಾಗೂ ‘ಮಜಾ ಟಾಕೀಸ್ ಬಳಿಕ ಈ ಶೋ ಪ್ರಸಾರ ಆರಂಭಿಸಲಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
‘ಕ್ವಾಟ್ಲೆ ಕಿಚನ್’ (Kwatle Kitchen) ಸೀರಿಸ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಶೋಗೆ ಅನುಪಮಾ ಗೌಡ ಹಾಗೂ ಕುರಿ ಪ್ರತಾಪ್ ನಿರೂಪಣೆ ಇರಲಿದೆ. ಇದು ಸಖತ್ ಫನ್ ಆಗಿ ಮೂಡಿ ಬರಲಿರುವ ಶೋ ಆಗಿರೋದ್ರಿಂದ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಬಾಯ್ಸ್ vs ಗರ್ಲ್ಸ್’ ಹಾಗೂ ‘ಮಜಾ ಟಾಕೀಸ್’ ಇತ್ತೀಚೆಗೆ ಪೂರ್ಣಗೊಂಡಿದೆ. ‘ಕ್ವಾಟ್ಲೆ ಕಿಚನ್’ ಸರಣಿಯಲ್ಲಿ ಅಡುಗೆ ಬರುವವರು ಹಾಗೂ ಬರದೇ ಇರುವವರು ಎಲ್ಲರೂ ಭಾಗವಹಿಸಲಿದ್ದಾರೆ. ಜೂನ್ 14ರಿಂದ ಶನಿ-ಭಾನು ರಾತ್ರಿ 9 ಗಂಟೆಗೆ ಪ್ರಸಾರ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jun 06, 2025 11:01 AM