Dharwad: ಮೇವು ತುಂಬಿದ ಬಂಡಿಯನ್ನು ಮನೆವರೆಗೆ ತಳ್ಳಿಕೊಂಡು ಹೋಗಿ ರೈತ ದಂಪತಿಗೆ ನೆರವಾದ ಸಚಿವ ಸಂತೋಷ್ ಲಾಡ್

Dharwad: ಮೇವು ತುಂಬಿದ ಬಂಡಿಯನ್ನು ಮನೆವರೆಗೆ ತಳ್ಳಿಕೊಂಡು ಹೋಗಿ ರೈತ ದಂಪತಿಗೆ ನೆರವಾದ ಸಚಿವ ಸಂತೋಷ್ ಲಾಡ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 11, 2023 | 2:05 PM

 ಅಸಲಿಗೆ ಬಂಡಿಯನ್ನು ಅವರು ತಳ್ಳಿಕೊಂಡು ಓಡುತ್ತಿದ್ದಾರೆ! ಜಾಗಿಂಗೂ ಆಯ್ತು, ರೈತ ದಂಪತಿಗೆ ಸಹಾಯ ಮಾಡಿದಂಗೂ ಆಯ್ತು!

ಧಾರವಾಡ: ಇದು ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಸರಳತೆ ಅಂತಾದರೆ ಓಕೆ ಮಾರಾಯ್ರೇ ಅವರ ಸರಳತೆ ಮತ್ತು ಮಾನವೀಯ ಗುಣ ಮೆಚ್ಚುವಂಥದ್ದು. ಆದರೆ ಕೆಮೆರಾಗೋಸ್ಕರ ಮಾಡಿದ್ದರೆ ಇಂಥದೆಲ್ಲ ಬೇಕಿತ್ತಾ ಅಸಿಬಿಡುತ್ತದೆ. ಅಸಲು ಸಂಗತಿಯೇನೆಂದರೆ ಜಿಲ್ಲೆಯ ಕಲಘಟಗಿ (Kalghatagi) ಪಟ್ಟಣದ ಹೊರವಲಯದಲ್ಲಿರುವ ಮಡಕಿಹೊನ್ನಳ್ಳಿ ಗ್ರಾಮದ ರೈತ ದಂಪತಿ (farmer couple) ತಮ್ಮ ದನಕರುಗಳಿಗೆ ಮೇವನ್ನು ತಳ್ಳುಬಂಡಿಯಲ್ಲಿ ಹೇರಿಕೊಂಡು ಮನೆಗೆ ಹಿಂತಿರುಗುವಾಗ ಜಾಗಿಂಗ್ ಹೋಗಿದ್ದ ಸಂತೋಷ್ ಲಾಡ್ ನೋಡಿದ್ದಾರೆ. ಕೂಡಲೇ ಅವರಿಂದ ತಳ್ಳುಬಂಡಿಯನ್ನು ತೆಗೆದುಕೊಂಡು ದಂಪತಿಯ ಮನೆವರೆಗೆ ವಿಡಿಯೋದಲ್ಲಿ ಕಾಣುತ್ತಿರುವ ಹಾಗೆ ತಳ್ಳಿಕೊಡು ಹೋಗಿದ್ದಾರೆ.  ಅಸಲಿಗೆ ಬಂಡಿಯನ್ನು ಅವರು ತಳ್ಳಿಕೊಂಡು ಓಡುತ್ತಿದ್ದಾರೆ! ಜಾಗಿಂಗೂ ಆಯ್ತು, ರೈತ ದಂಪತಿಗೆ ಸಹಾಯ ಮಾಡಿದಂಗೂ ಆಯ್ತು! ಪಾಪ ರೈತ, ಸಚಿವರ ಹಿಂದೆ ಏದುಸಿರು ಬಿಡುತ್ತಾ ಓಡುತ್ತಿದ್ದಾರೆ. ಅವರಿಂದ ತಪ್ಪಿಸಿಕೊಳ್ಳೋ ಹಾಗೆ ಸಚಿವ ಆಗಾಗ ತಿರುಗಿ ನೋಡುತ್ತಾ ಓಟ ಮುಂದುವರಿಸುತ್ತಾರೆ!

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ