ರೈತನ ಹೊಲದಲ್ಲಿ ಮೊಸಳೆ ಪ್ರತ್ಯಕ್ಷ; ಗ್ರಾಮಸ್ಥರೇ ಸೆರೆ ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗೆ ಹಸ್ತಾಂತರ
ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಜನವಾಡ ಗ್ರಾಮದ ಪುಂಡಲೀಕ ಚಿಕ್ಕಲಕಿ ಎಂಬ ರೈತರ ಹೊಲದಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರೇ ಸೇರಿ ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಹಸ್ತಾಂತರ ಮಾಡಿದ್ದಾರೆ.
ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಜನವಾಡ ಗ್ರಾಮದ ಪುಂಡಲೀಕ ಚಿಕ್ಕಲಕಿ ಎಂಬ ರೈತರ ಹೊಲದಲ್ಲಿ ಮೊಸಳೆ(Crocodile) ಪ್ರತ್ಯಕ್ಷವಾಗಿತ್ತು. ಕೆಲ ದಿನಗಳಿಂದ ಹೊಲದ ಬಾವಿಯಲ್ಲಿಯೇ ಬೀಡು ಬಿಟ್ಟಿದ್ದ ಮೊಸಳೆ, ಇದೀಗ ಹೊರಬರುತ್ತಿದ್ದಂತೆ ಗ್ರಾಮಸ್ಥರು ಸೆರೆ ಹಿಡಿದಿದ್ದಾರೆ. ಬರೊಬ್ಬರಿ ಎಂಟು ಅಡಿ ಉದ್ದ ಹಾಗೂ ಎರಡು ಕ್ವಿಂಟಾಲ್ ತೂಕವಿದೆ. ಇನ್ನು ಮೊಸಳೆ ಹಿಡಿಯುವ ಬರದಲ್ಲಿ ರಾಡ್ಗೆ ಕಟ್ಟಿ ದರ ದರನೆ ಎಳೆದೊಯ್ಯುವ ಮೂಲಕ ಯುವಕರು ಮೊಸಳೆಗೆ ಹಿಂಸೆ ನೀಡಿದ್ದಾರೆ. ನಂತರ ಜಮಖಂಡಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮೊಸಳೆ ಹಸ್ತಾಂತರಿಸಿದ್ದು, ಮೊಸಳೆಯನ್ನು ಆಲಮಟ್ಟಿ ಜಲಾಶಯಕ್ಕೆ ಬಿಡಲಾಗಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 11, 2023 12:48 PM
Latest Videos