ವಿಧಾನಸೌಧದ ಪೂರ್ವ ಗೇಟ್ ಓಪನ್ ಮಾಡಿಸಿ ಎಂದ ಸಚಿವ ಕೆ.ಜೆ.ಜಾರ್ಜ್ಗೆ ಸ್ಪೀಕರ್ ಖಾದರ್ ಟಾಂಗ್
ವಿಧಾನಸೌಧದ ಸುತ್ತಮುತ್ತ ಟ್ರಾಫಿಕ್ಜಾಮ್ ಹಿನ್ನೆಲೆ ವಿಧಾನಸೌಧದ ಪೂರ್ವ ಗೇಟ್ ತೆರೆಯುವಂತೆ ವಿಧಾನಸಭೆಯಲ್ಲಿ ಸ್ಪೀಕರ್ ಖಾದರ್ಗೆ ಕೆ.ಜೆ.ಜಾರ್ಜ್ ಮನವಿ ಮಾಡಿದ್ರು. ಈ ವೇಳೆ ಇದಕ್ಕೆ ಉತ್ತರಿಸಿದ ಸ್ಪೀಕರ್ ಖಾದರ್ ಅರ್ಧ ಗಂಟೆ ಮೊದಲೇ ಬಂದರೆ ಬೇಗ ಸದನಕ್ಕೆ ತಲುಪಬಹುದು ಎಂದರು.
ಬೆಂಗಳೂರು: ವಿಧಾನಸಭಾ ಕಲಾಪದಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಸ್ಪೀಕರ್ ಖಾದರ್ ಟಾಂಗ್ ಕೊಟ್ಟಿದ್ದಾರೆ. ವಿಧಾನಸೌಧದ ಸುತ್ತಮುತ್ತ ಟ್ರಾಫಿಕ್ಜಾಮ್ ಹಿನ್ನೆಲೆ ವಿಧಾನಸೌಧದ ಪೂರ್ವ ಗೇಟ್ ತೆರೆಯುವಂತೆ ವಿಧಾನಸಭೆಯಲ್ಲಿ ಸ್ಪೀಕರ್ ಖಾದರ್ಗೆ ಕೆ.ಜೆ.ಜಾರ್ಜ್ ಮನವಿ ಮಾಡಿದ್ರು. ಈ ವೇಳೆ ಇದಕ್ಕೆ ಉತ್ತರಿಸಿದ ಸ್ಪೀಕರ್ ಖಾದರ್ ಅರ್ಧ ಗಂಟೆ ಮೊದಲೇ ಬಂದರೆ ಬೇಗ ಸದನಕ್ಕೆ ತಲುಪಬಹುದು ಎಂದರು.
ಆಗ ಮರು ಪ್ರತಿಕ್ರಿಯೆ ಕೊಟ್ಟ ಸಚಿವ ಕೆ.ಜೆ.ಜಾರ್ಜ್, ಬೇಕಾದರೆ ಮೂರು ಗಂಟೆ ಮೊದಲೇ ಹೊರಡುತ್ತೇವೆ. ಕನಿಷ್ಠ ಅಧಿವೇಶನದ ಸಮಯದಲ್ಲಾದರೂ ಗೇಟ್ ಓಪನ್ ಮಾಡಿಸಿ ಎಂದರು. ಈ ಬಗ್ಗೆ ಚರ್ಚೆ ಮಾಡಿ ಪರಿಶೀಲನೆ ಮಾಡುತ್ತೇವೆ ಎಂದ ಸ್ಪೀಕರ್ ತಿಳಿಸಿದರು. ಇವರಿಬ್ಬರ ನಡುವೆ ಬಂದ ಶಾಸಕ ಬಸನಗೌಡ ಯತ್ನಾಳ್, ವಿಧಾನಸೌಧದ ಪೂರ್ವ ಗೇಟ್ ವಾಸ್ತು ಪ್ರಕಾರ ಇದೆ. ಅದನ್ನು ಓಪನ್ ಮಾಡಿಸಿ ಎಂದರು. ನನ್ನ ವಾಸ್ತು ಸರಿ ಇದೆ ಅಲ್ವಾ ಎಂದು ಸ್ಪೀಕರ್ ಯು.ಟಿ.ಖಾದರ್ ಟಾಂಗ್ ಕೊಟ್ಟರು. ಡೌಟ್ ಇದ್ದರೆ ರೇವಣ್ಣ ಬಳಿ ಕೇಳಬಹುದು ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಸದನದಲ್ಲಿ ನಗೆ ಚಟಾಕಿ ಹಾರಿಸಿದರು.