ಪಂಜಾಬ್: ಅಂಬಾಲಾದ ಬೀದಿಯಲ್ಲಿ ಮಳೆ ನೀರಿನೊಂದಿಗೆ ಬಂತು ಮೊಸಳೆ!
ಮೊಸಳೆಯನ್ನು ಕಂಡೊಂಡನೆ ಜನರು ಮನೆಗೆ ಬಾಗಿಲು ಹಾಕಿ ಮಹಡಿಯಲ್ಲಿ ನಿಂತು ನೋಡುತ್ತಿರುವ ದೃಶ್ಯ ಕಂಡು ಬಂತು. ಮೊಸಳೆ ಬೀದಿಯಲ್ಲಿ ಮಳೆ ನೀರಲ್ಲಿ ತೆವಳುತ್ತಿದ್ದುದನ್ನು ಕಂಡು ಜನರು ಯಾರೂ ಬೀದಿಗೆ ಇಳಿದಿಲ್ಲ
ಭಾರೀ ಮಳೆಯ ನಂತರ, ಉತ್ತರ ಭಾರತದ ಬಹುತೇಕ ರಾಜ್ಯಗಳು ಪ್ರವಾಹದಂತಹ ಪರಿಸ್ಥಿತಿಗಳನ್ನು ಎದುರಿಸುತ್ತಿವೆ. ಪಂಜಾಬ್ (Punjab), ಹರ್ಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ (Himachal Pradesh) ಬಹುತೇಕ ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿವೆ. ಅವುಗಳ ನೀರು ನಗರಗಳು ಮತ್ತು ಹಳ್ಳಿಗಳ ಬೀದಿಗಳಲ್ಲಿ ಹರಿದಿದ್ದಿ ಈ ನೀರಿನೊಂದಿಗೆ ಇಂತಹ ಹಲವು ಜೀವಿಗಳು ಕೂಡಾ ನಾಡಿಗೆ ಕಾಲಿಟ್ಟಿವೆ. ಅಂಬಾಲದ ಬೀದಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಇದೇ ರೀತಿಯ ದೃಶ್ಯ ಕಂಡುಬಂದಿದ್ದು ಜನರು ಭಯಭೀತರಾಗಿದ್ದಾರೆ. ಪ್ರವಾಹದ ನೀರಿನಲ್ಲಿ ಮೊಸಳೆಯೊಂದು ಇಲ್ಲಿನ ಬೀದಿಗಳಲ್ಲಿ ಕಾಣಿಸಿಕೊಂಡಿದೆ. ಈ ಮೊಸಳೆ ರಸ್ತೆಯಲ್ಲಿ ಸುತ್ತಾಡುತ್ತಿರುವುದನ್ನು ಕಂಡು ಜನರು ಗಾಬರಿಗೊಂಡಿದ್ದಾರೆ.
ಮೊಸಳೆಯನ್ನು ಕಂಡೊಂಡನೆ ಜನರು ಮನೆಗೆ ಬಾಗಿಲು ಹಾಕಿ ಮಹಡಿಯಲ್ಲಿ ನಿಂತು ನೋಡುತ್ತಿರುವ ದೃಶ್ಯ ಕಂಡು ಬಂತು. ಮೊಸಳೆ ಬೀದಿಯಲ್ಲಿ ಮಳೆ ನೀರಲ್ಲಿ ತೆವಳುತ್ತಿದ್ದುದನ್ನು ಕಂಡು ಜನರು ಯಾರೂ ಬೀದಿಗೆ ಇಳಿದಿಲ್ಲ ಎಂದು ಟಿವಿ9 ಪಂಜಾಬಿ ವರದಿ ಮಾಡಿದೆ.
अंबाला की गलियों में ? #Ambala #Flood pic.twitter.com/o64QjLljLF
— Jaswinder Singh Bisla (@JaswinderBisla) July 10, 2023
ಮೊಸಳೆ ನದಿಗೆ ಮರಳಿದೆ ಎಂದು ಆಡಳಿತವು ಯಾವಾಗ ಘೋಷಿಸುತ್ತದೆ ಎಂದು ಇವರು ಕಾಯುತ್ತಿದ್ದು, ಮೊಸಳೆ ಇಲ್ಲ ಎಂದು ಖಚಿತ ಮಾಹಿತಿ ಲಭಿಸಿದ ನಂತರವೇ ಇವರು ದೈನಂದಿನ ಕೆಲಸಕ್ಕೆ ಮರಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಹಿಮಾಚಲ ಪ್ರದೇಶದ ಸಿಎಂಗೆ ದೂರವಾಣಿ ಕರೆ ಮಾಡಿ ಪ್ರವಾಹ ಪೀಡಿತ ರಾಜ್ಯದ ಸ್ಥಿತಿಗತಿ ವಿಚಾರಿಸಿದ ಪ್ರಧಾನಿ ಮೋದಿ
ಭಾರೀ ಮಳೆಯಿಂದಾಗಿ ಪ್ರವಾಹದಂಥಾ ಪರಿಸ್ಥಿತಿ
ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯ ನಂತರ, ಪಂಜಾಬ್, ಹರ್ಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಪ್ರವಾಹದಂತಹ ಪರಿಸ್ಥಿತಿ ಇದೆ.ತುರ್ತು ಪರಿಸ್ಥಿತಿಯ ಹೊರತು ಜನರು ಮನೆಯಿಂದ ಹೊರಗೆ ಬರಬಾರದು ಎಂದು ಆಡಳಿತ ಮಂಡಳಿ ಮನವಿ ಮಾಡಿದೆ. ಆಡಳಿತ ಮತ್ತು ಸರ್ಕಾರಗಳು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ನಿರಂತರವಾಗಿ ತೊಡಗಿಸಿಕೊಂಡಿವೆ. ಪ್ರವಾಹ ಪೀಡಿತ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗುತ್ತಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ