ರಾಮನಗರ: ಬಸ್​ನಲ್ಲಿ ನೇತಾಡುತ್ತ ಪ್ರಯಾಣ ಮಾಡಿದ ಮಕ್ಕಳು; ವಿಡಿಯೋ ಇಲ್ಲಿದೆ

ಕಾಲೇಜು, ಶಾಲೆಗಳಿಗೆ ತಡವಾಗುತ್ತೆ ಅಂತ ಮಕ್ಕಳು ಜೀವದ ಹಂಗು ತೊರೆದು ಬಸ್​ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಚನ್ನಪಟ್ಟಣದಿಂದ ರಾಮನಗರಕ್ಕೆ ಪ್ರಯಾಣಿಸುತ್ತಿದ್ದಾರೆ.

ಶಾಲೆ, ಕಾಲೇಜುಗಳು ಆರಂಭವಾಗುತ್ತಿದ್ದಂತೆ ವಿದ್ಯಾರ್ಥಿಗಳಿಗೆ ಒಂದು ದೊಡ್ಡ ಸಮಸ್ಯೆ ಎದುರಾಗಿದೆ. ಗ್ರಾಮೀಣ ಭಾಗದ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಸಿಟಿಗೆ ಬರಬೇಕು. ಆದರೆ ಊರಿಗೆ ಒಂದೊಂದೆ ಬಸ್ ಇರುವ ಕಾರಣ ಅದೇ ಬಸ್​ನಲ್ಲಿ ಎಲ್ಲರೂ ಬರಬೇಕು. ಇಲ್ಲದಿದ್ದರೆ ನಡೆದುಕೊಂಡೆ ಹೋಗಬೇಕು. ಆದರೆ ಕಾಲೇಜು, ಶಾಲೆಗಳಿಗೆ ತಡವಾಗುತ್ತೆ ಅಂತ ಮಕ್ಕಳು ಜೀವದ ಹಂಗು ತೊರೆದು ಬಸ್​ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಚನ್ನಪಟ್ಟಣದಿಂದ ರಾಮನಗರಕ್ಕೆ ಪ್ರಯಾಣಿಸುತ್ತಿದ್ದಾರೆ. ಬಸ್ ಬಾಗಿಲ ತುದಿ ನಿಂತು ಪ್ರಯಾಣ ಮಾಡುತ್ತಿದ್ದಾರೆ. ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಬಸ್ ಕೊರತೆಯಿಂದ ಅನಿವಾರ್ಯವಾಗಿ ಮಕ್ಕಳು ಬಸ್​ನಲ್ಲಿ ನೇತಾಡುತ್ತ ಹೋಗಬೇಕು. ಪ್ರತಿನಿತ್ಯ ವಿದ್ಯಾರ್ಥಿಗಳು ಜೋತು ಬಿದ್ದು ಪ್ರಯಾಣ ನಡೆಸಿದ್ದರು, ಅಧಿಕಾರಿಗಳು ಮಾತ್ರ ಇದರ ಗಮನಕೊಡುತ್ತಿಲ್ಲ. ವಿದ್ಯಾರ್ಥಿಗಳ ಪರದಾಟ ಸದ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ.

Click on your DTH Provider to Add TV9 Kannada