BBK9: ಬಣ್ಣದಾಟ, ಎರಚಾಟ, ಕಿರುಚಾಟ: ಬಿಗ್ ಬಾಸ್ ಮನೆಯಲ್ಲಿ ಹೊಡೆದಾಡಿಕೊಂಡ ಲೇಡಿಸ್
ಬಿಗ್ ಬಾಸ್ 'ಬಣ್ಣದಾಟ' ಎಂಬ ಟಾಸ್ಕ್ ಒಂದನ್ನು ನೀಡಿದ್ದು, ಈ ಆಟದಲ್ಲಿ ದೊಡ್ಮನೆ ಮಹಿಳಾ ಸ್ಪರ್ಧಿಗಳಿಬ್ಬರು ಹೊಡೆದಾಡಿಕೊಂಡಿದ್ದಾರೆ.
ಬಿಗ್ ಬಾಸ್ (Bigg Boss Kannada Season 9) ಮನೆಯಲ್ಲಿ ಕೋಪ, ಜಗಳ ಸಾಮಾನ್ಯ. ಕೆಲವೊಮ್ಮೆ ಸಣ್ಣ ಸಣ್ಣ ವಿಚಾರಕ್ಕೆ ಕೋಪ, ತಾಪ ಉಂಟಾದರೆ, ಇನ್ನು ಕೆಲವೊಮ್ಮೆ ಟಾಸ್ಕ್ ಆಡುವಾಗ. ಸದ್ಯ ದೊಡ್ಮನೆಲಿ ಮಹಿಳಾ ಸ್ಪರ್ಧಿಗಳಿಬ್ಬರು ಹೊಡೆದಾಡಿಕೊಂಡಿದ್ದಾರೆ. ಬಿಗ್ ಬಾಸ್ ‘ಬಣ್ಣದಾಟ’ ಎಂಬ ಟಾಸ್ಕ್ ಒಂದನ್ನು ನೀಡಿದ್ದಾರೆ. ಈ ಆಟದಲ್ಲಿ ದೀಪಿಕಾ ದಾಸ್ (Deepika Das) ಮತ್ತು ಅಮ್ಯೂಲ ಗೌಡ (Amulya Gowda) ಕಣಕ್ಕಿಳಿದಿದ್ದು, ಟಾಸ್ಕ್ನ ನಿಯಮದಂತೆ ಆಟವಾಡದೆ ಪರಸ್ಪರ ಬಣ್ಣ ಎರೆಚಾಡಿಕೊಂಡಿದ್ದಾರೆ. ಹಾಗಾಗಿ ಇವರ ಮಧ್ಯೆ ಕಿರುಚಾಟ ಉಂಟಾಗಿದೆ. ಇವರಿಬ್ಬರ ಈ ಆಟದಲ್ಲಿ ಗೆದ್ದವರು ಯಾರು ಎನ್ನುವ ಗೊಂದಲ ಮನೆ ಕ್ಯಾಪ್ಟನ್ನಲ್ಲಿ ಉಂಟಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Dec 07, 2022 09:10 PM