‘ಸರಿಗಮಪ’ ಫಿನಾಲೆಯಲ್ಲಿ ಲಹರಿ ಮಹೇಶ್​ಗೆ ಇಲ್ಲ ಸ್ಥಾನ; ಅಭಿಮಾನಿಗಳ ಆಕ್ರೋಶ

Updated on: May 26, 2025 | 9:59 AM

‘ಸರಿಗಮಪ’ ಫಿನಾಲೆ ಲಿಸ್ಟ್ ಘೋಷಣೆ ಆಗಿದೆ. ಒಟ್ಟೂ ಆರು ಮಂದಿ ಈ ಫಿನಾಲೆಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ, ಲಹರಿ ಮಹೇಶ್ ಅವರು ಫಿನಾಲೆಯಲ್ಲಿ ಇಲ್ಲ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅವರ ಕಂಠವನ್ನು ಎಲ್ಲರೂ ನೆಚ್ಚಿಕೊಂಡಿದ್ದರು. ಆದರೆ, ಫಿನಾಲೆಯಲ್ಲಿ ಅವರಿಲ್ಲ ಎಂಬುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

‘ಸರಿಗಮಪ’ (Saregamapa) ಫಿನಾಲೆಗೆ ದಿನಗಣನೆ ಶುರುವಾಗಿದೆ. ಈ ಬಾರಿ ಫಿನಾಲೆಯಲ್ಲಿ ಶಿವಾನಿ, ರಶ್ಮಿ ಡಿ, ಬಾಳು ಬೆಳಗುಂದಿ, ಆರಾಧ್ಯಾ ರಾವ್, ದ್ಯಾಮೇಶ್ ಹಾಗೂ ಅಮೋಘ ವರ್ಷ ಇದ್ದಾರೆ. ಆದರೆ, ಅತ್ಯುತ್ತಮವಾಗಿ ಹಾಡಿ ಗಮನ ಸೆಳೆದ ಲಹರಿ ಅವರಿಗೆ ಫಿನಾಲೆಗೆ ಅವಕಾಶ ಸಿಕ್ಕಿಲ್ಲ. ಇದಕ್ಕೆ ಅನೇಕರು ಅಪಸ್ವರ ತೆಗೆದಿದ್ದಾರೆ. ‘ಲಹರಿ ಉತ್ತಮವಾಗಿ ಹಾಡಿದವರು. ಅವರಿಗೆ ಫೈನಲ್​ಗೆ ಬರೋ ಅವಕಾಶ ಇತ್ತು’ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ. ಅವರ ಧ್ವನಿಯಲ್ಲಿ ಮೂಡಿ ಬಂದ ಹಾಡನ್ನು ನೀವೇ ಕೇಳಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.