ಮೈಸೂರಿನ ಅವಧೂತ ದತ್ತಪೀಠದಿಂದ ಭಾರತೀಯ ಸೇನೆಗೆ ₹ 25 ಲಕ್ಷ ದೇಣಿಗೆ, ಚೆಕ್ ಸ್ವೀಕರಿಸಿದ ಸಂಸದ ಯದುವೀರ್
ಭಾರತೀಯ ಸೇನಾನಿಧಿಗೆ ಅವಧೂತ ದತ್ತಪೀಠ ದೇಣಿಗೆಯನ್ನು ನೀಡುತ್ತಿರೋದು ಇದು ಮೊದಲ ಸಲವೇನಲ್ಲ, ಕಾರ್ಯಕ್ರಮದ ನಿರೂಪಕರು ಹೇಳುವಂತೆ ಇದು ದತ್ತಪೀಠದ ಪರಂಪರೆಯಾಗಿ ಬೆಳೆದಿದೆ. ಚೆಕ್ ಸ್ವೀಕರಿಸಿ ಮಾತಾಡಿದ ಸಂಸದ ಯದುವೀರ್, ದತ್ತ ವಿಜಯಾನಂದ ಶ್ರೀಗಳಿಗೆ ಧನ್ಯವಾದ ಮತ್ತು ಕೃತಜ್ಞತೆಯನ್ನು ಸಲ್ಲಿಸಿ ಚೆಕ್ ಅನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸುವುದಾಗಿ ಹೇಳಿದರು.
ಮೈಸೂರು, ಮೇ 26: ಭಾರತೀಯ ಸೇನೆಯ (Indian armed forces) ಸೇವೆಯನ್ನು ಎಷ್ಟು ಕೊಂಡಾಡಿದರೂ ಸಾಲದು. ಸೇನೆಯಿಂದಾಗೇ ನಾವೆಲ್ಲ ಮನೆಗಳಲ್ಲಿ ನೆಮ್ಮದಿಯಿಂದ ನಿದ್ರೆ ಮಾಡೋದು. ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಆಶ್ರಮ-ಅವಧೂತ ದತ್ತಪೀಠ ಇದನ್ನು ಬಹಳ ಚೆನ್ನಾಗಿ ಅರ್ಥಮಾಡಿಕೊಂಡಿದೆ. ನಿನ್ನೆ ದತ್ತ ವೆಂಕಟೇಶ್ವರ ಕ್ಷೇತ್ರದ 26ನೇ ಬ್ರಹ್ಮೋತ್ಸವ ಆಚರಿಸಿದ ಬಳಿಕ ದತ್ತ ವಿಜಯಾನಂದ ಶ್ರೀ ಅವರು ಭಾರತೀಯ ಸೇನಾನಿಧಿಗೆ ರೂ. 25 ಲಕ್ಷ ದೇಣಿಗೆಯನ್ನು ನೀಡಿದರು. ಸರ್ಕಾರದ ಪರವಾಗಿ ಮೈಸೂರಿನ ಸಂಸದ ಯದುವೀರ್ ಕೃಷ್ಣದತ್ ಒಡೆಯರ್ ಚೆಕ್ ಅನ್ನು ಸ್ವೀಕರಿಸಿದರು.
ಇದನ್ನೂ ಓದಿ: ಮೈಸೂರು ಸ್ಯಾಂಡಲ್ ಸೋಪಿಗೆ ತಮನ್ನಾ ಭಾಟಿಯಾ ಏಕೆ ಬೇಡ, ಸ್ಪಷ್ಟ ಕಾರಣ ನೀಡಿದ ಸಂಸದ ಯದುವೀರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

