ಭಾರಿ ಮಳೆಗೆ ಮಂಗಳೂರು ಪಂಪ್ವೆಲ್ ಫ್ಲೈಓವರ್ ಕೆಳಭಾಗದಲ್ಲಿ ಪ್ರವಾಹ: ವಾಹನ ಸಂಚಾರ ಅಸ್ತವ್ಯಸ್ತ
ಮಂಗಳೂರಿನಲ್ಲಿ ಭಾರೀ ಮಳೆಗೆ ರಸ್ತೆಗಳಲ್ಲಿ ಜಲಪ್ರವಾಹ ಉಂಟಾಗಿದೆ. ಮಂಗಳೂರು ನಗರದ ಹಲವು ಜನ ವಸತಿ ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ರಸ್ತೆಗಳಲ್ಲಿ ನದಿಗಳ ಮಾದರಿಯಲ್ಲಿ ಭಾರೀ ಮಳೆ ನೀರು ಉಕ್ಕಿ ಬರುತ್ತಿದೆ. ಇಡೀ ರಸ್ತೆಯಲ್ಲಿ ಭಾರೀ ಪ್ರಮಾಣದ ನೀರು ಹರಿದು ಮನೆಗಳಿಗೆ ನುಗ್ಗಿ ಹಾನಿಯಾಗಿದೆ. ಪಂಪ್ವೆಲ್ ಫ್ಲೈಓವರ್ ಕೆಳಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಮಂಗಳೂರು, ಮೇ 26: ಈ ವರ್ಷದ ಮೊದಲ ಮುಂಗಾರು ಮಳೆಗೇ ಮಂಗಳೂರು ನಗರದ ಪಂಪ್ವೆಲ್ ಫ್ಲೈಓವರ್ ಕೆಳಭಾಗ ಎರಡನೇ ಬಾರಿ ಜಲಾವೃತವಾಗಿದೆ. ನಿರಂತರ ಮಳೆಯ ಕಾರಣ ರಾಜಕಾಲುವೆ ತುಂಬಿ ಹರಿದಿದ್ದು, ಪಂಪ್ವೆಲ್ನಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಪರಿಣಾಮವಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಎರಡು ಗಂಟೆಯಿಂದ ನಿರಂತರವಾಗಿ ಸುರಿದ ಭಾರೀ ಮಳೆಯಿಂದ ಫ್ಲೈಓವರ್ ಕೆಳಭಾಗ ಸಂಪೂರ್ಣ ಜಲಾವೃತಗೊಂಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಭೀಕರ ಜಲ ಸಂಕಷ್ಟ: ರಾಯಚೂರು, ಕಲಬುರಗಿ, ಬೀದರಲ್ಲಿ ಕುಡಿಯುವ ನೀರಿಗಾಗಿ ಪರದಾಟ
ವಿಜಯಲಕ್ಷ್ಮಿ-ಧನ್ವೀರ್ ವಿವಾದದ ಬಗ್ಗೆ ದರ್ಶನ್ಗೆ ತಿಳಿಸುತ್ತೇವೆಂದ ವಕೀಲ
RSS ಪಥಸಂಚಲನಕ್ಕೆ ಸಿದ್ಧತೆ: ಕೆಲವೆಡೆ ಷರತ್ತುಬದ್ಧ ಅನುಮತಿ; ಕೆಲವೆಡೆ ನಕಾರ
‘ಪ್ರೇಮದ ಊರಲಿ’ ಸಿನಿಮಾ ಸಂಗೀತ ನಿರ್ದೇಶಕರಿಗೆ ಸಿಕ್ಕ ಸಂಭಾವನೆ ಎಷ್ಟು?

