ಲಕ್ಕುಂಡಿ: 4ನೇ ದಿನದ ಉತ್ಖನನ ವೇಳೆ ಸಿಕ್ತು ಪುರಾತನ ಶಿಲೆ; ವಿಡಿಯೋ ನೋಡಿ
ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದಲ್ಲಿ ನಾಲ್ಕನೇ ದಿನದಂದು ಕೋಟೆ ವೀರಭದ್ರೇಶ್ವರ ದೇವಾಲಯದ ಆವರಣದಲ್ಲಿ ಮತ್ತೊಂದು ಪುರಾತನ ಶಿಲೆ ಪತ್ತೆಯಾಗಿದೆ. ಈ ಹಿಂದೆ ಶಿವಲಿಂಗ ಪಾಣಿಪೀಠ, ಶಿವಲಿಂಗ ಮೂರ್ತಿ ಮತ್ತು ನಾಗರ ಹಾವು ಕೆತ್ತನೆಗಳು ಸಿಕ್ಕಿದ್ದು, ಹೊಸದಾಗಿ ಸ್ಥಂಭದ ಬೋದಿಗೆ ಭಾಗದ ಅವಶೇಷ ಪತ್ತೆಯಾಗಿರುವುದು ಐತಿಹಾಸಿಕ ಕುತೂಹಲ ಕೆರಳಿಸಿದೆ.
ಗದಗ, ಜನವರಿ 19: ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ 4ನೇ ದಿನದ ಉತ್ಖನನ ಕಾರ್ಯ ವೇಳೆ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಮತ್ತೊಂದು ಪುರಾತನ ಶಿಲೆ ಪತ್ತೆ ಆಗಿದೆ. ಐತಿಹಾಸಿಕ ದೇವಸ್ಥಾನ ಸ್ತಂಭದ ಮತ್ತು ವಿತಾನದ (ಛತ್ತು) ಮಧ್ಯದಲ್ಲಿರುವ ಬೋದಿಗೆ (ಕಂಬದ ಮೇಲ್ಭಾಗದಲ್ಲಿರುವ ಒಂದು ಭಾಗ) ಅವಶೇಷ ಪತ್ತೆ ಆಗಿದೆ. ಸದ್ಯ ಪತ್ತೆಯಾಗಿರುವ ವಿಶೇಷ ಅವಶೇಷಗಳು ಮತ್ತಷ್ಟು ಕುತೂಹಲ ಮೂಡಿಸಿವೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.