ಲಕ್ಕುಂಡಿಯಲ್ಲಿ ನಿಧಿ ರಹಸ್ಯ: ಬಸವಣ್ಣ ದೇವಸ್ಥಾನದಲ್ಲಿ ಸರ್ಪದ ಪೊರೆ ಪತ್ತೆ

Edited By:

Updated on: Feb 08, 2026 | 5:52 PM

ಕಲ್ಯಾಣಿ ಚಾಲುಕ್ಯರ ಬಂಗಾರದ ನಾಣ್ಯಗಳ ಟಂಕಸಾಲೆ, ಶಿಲ್ಪಕಲೆಗಳ ತೊಟ್ಟಿಲು, ಕಲೆಗಳ ಬೀಡು ಎಂದು ಪ್ರಸಿದ್ಧಿಯಾದ ಲಕ್ಕುಂಡಿ ಕೇವಲ ಕಲ್ಲಿನ ಕೆತ್ತನೆಗಳಿಗಷ್ಟೇ ಸೀಮಿತವಾಗಿಲ್ಲ. ಇದರ ಮಣ್ಣಿನ ಅಡಿಯಲ್ಲಿ ಅಡಗಿರುವ ಅಗಾಧ ಸಂಪತ್ತು ಮತ್ತು ಆ ಸಂಪತ್ತನ್ನು ಕಾಯುತ್ತಿರುವ ನಾಗರಹಾವುಗಳ ರಹಸ್ಯ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಐತಿಹಾಸಿ ಕೋಡಿ ಬಸವಣ್ಣ ದೇವಸ್ಥಾನಕ್ಕೆ ಸರ್ಪ ಕಾವಲು ಇದೆಯಂತೆ. ಈ ದೇವಸ್ಥಾನದಲ್ಲಿ ಅಪಾರ ಸಂಪತ್ತು ಇದ್ದು, ಸುತ್ತಲೂ ನಾಗಸರ್ಪ ಕಾವಲಿದೆ. ಇದಕ್ಕೆ ಪೂರಕವೆಂಬಂತೆ ದೇವಸ್ಥಾನ ಗರ್ಭಗುಡಿಯಲ್ಲಿ ನಾಗರ ಹಾವಿನ‌ ಪೊರೆ ಪತ್ತೆಯಾಗಿದೆ.

ಗದಗ (ಫೆಬ್ರವರಿ. 08): ಕಲ್ಯಾಣಿ ಚಾಲುಕ್ಯರ ಬಂಗಾರದ ನಾಣ್ಯಗಳ ಟಂಕಸಾಲೆ, ಶಿಲ್ಪಕಲೆಗಳ ತೊಟ್ಟಿಲು, ಕಲೆಗಳ ಬೀಡು ಎಂದು ಪ್ರಸಿದ್ಧಿಯಾದ ಲಕ್ಕುಂಡಿ (Lakkundi) ಕೇವಲ ಕಲ್ಲಿನ ಕೆತ್ತನೆಗಳಿಗಷ್ಟೇ ಸೀಮಿತವಾಗಿಲ್ಲ. ಇದರ ಮಣ್ಣಿನ ಅಡಿಯಲ್ಲಿ ಅಡಗಿರುವ ಅಗಾಧ ಸಂಪತ್ತು ಮತ್ತು ಆ ಸಂಪತ್ತನ್ನು ಕಾಯುತ್ತಿರುವ ನಾಗರಹಾವುಗಳ ರಹಸ್ಯ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಐತಿಹಾಸಿ ಕೋಡಿ ಬಸವಣ್ಣ ದೇವಸ್ಥಾನಕ್ಕೆ ಸರ್ಪ ಕಾವಲು ಇದೆಯಂತೆ. ಈ ದೇವಸ್ಥಾನದಲ್ಲಿ ಅಪಾರ ಸಂಪತ್ತು ಇದ್ದು, ಸುತ್ತಲೂ ನಾಗಸರ್ಪ ಕಾವಲಿದೆ. ಇದಕ್ಕೆ ಪೂರಕವೆಂಬಂತೆ ದೇವಸ್ಥಾನ ಗರ್ಭಗುಡಿಯಲ್ಲಿ ನಾಗರ ಹಾವಿನ‌ ಪೊರೆ ಪತ್ತೆಯಾಗಿದ್ದು, ಗರ್ಭಗುಡಿಯ ಬಲಭಾಗದಲ್ಲಿ ಹಂಡೆ ಆಕಾರದ ಕಲ್ಲು ಪೊದೆಯಲ್ಲಿ ಹಾವಿನ ಪೊರೆ ಪತ್ತೆಯಾಗಿದೆ. ಹೀಗಾಗಿ ಇದೇ ಜಾಗದಲ್ಲಿ ಅಪಾರ ನಿಧಿ‌ ಇದೆ ಎನ್ನಲಾಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Feb 08, 2026 05:50 PM
Follow Us
Sanjeev Pandre

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More