Gruha Lakshmi Scheme: ಆಧಾರ ಲಿಂಕ್ ಆಗಿರದ ಬ್ಯಾಂಕ್ ಖಾತೆದಾರರಿಗೆ ಗೃಹ ಲಕ್ಷ್ಮಿ ಯೋಜನೆ ಹಣ ಹೇಗೆ ತಲುಪುತ್ತದೆ ಅಂತ ವಿವರಿಸಿದ ಲಕ್ಷ್ಮಿ ಹೆಬ್ಬಾಳ್ಕರ್

Gruha Lakshmi Scheme: ಆಧಾರ ಲಿಂಕ್ ಆಗಿರದ ಬ್ಯಾಂಕ್ ಖಾತೆದಾರರಿಗೆ ಗೃಹ ಲಕ್ಷ್ಮಿ ಯೋಜನೆ ಹಣ ಹೇಗೆ ತಲುಪುತ್ತದೆ ಅಂತ ವಿವರಿಸಿದ ಲಕ್ಷ್ಮಿ ಹೆಬ್ಬಾಳ್ಕರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 15, 2023 | 2:09 PM

ಹೆಸರು ಮತ್ತು ವಿವರಗಳು ತಾಳೆ ಹೊಂದಿದರೆ ಅವರು ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿ ಎಂಬ ಆದೇಶ ಮನೆ ತಲುಪುತ್ತದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಬೆಂಗಳೂರು: ಆಧಾರ್ ಲಿಂಕ್ (Aadhaar link) ಆಗಿರದ ಬ್ಯಾಂಕ್ ಖಾತೆದಾರರಿಗೆ (ಮನೆಯ ಯಜಮಾನಿ) ಗೃಹ ಲಕ್ಷ್ಮಿ ಯೋಜನೆಯ (Gruha Lakshmi) ಪ್ರಯೋಜನ ಹೇಗೆ ಲಭ್ಯವಾಗುತ್ತದೆ ಅನ್ನೋದನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಇಂದು ಬೆಂಗಳೂರಲ್ಲಿ ಸುದ್ದಿಗೋಷ್ಟಿಯೊಂದನ್ನು ನಡೆಸಿ ವಿವರಿಸಿದರು. ಆಧಾರ್ ಲಿಂಕ್ ಇರದ ಬ್ಯಾಂಕ್ ಹೊಂದಿರುವ ಗೃಹಿಣಿ ತನ್ನ ಪಾಸ್ ಬುಕ್ ಅನ್ನು ಸಂಬಂಧಪಟ್ಟ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಿದಾಗ ಅದು ಸಿಡಿಪಿಒ, ತಹಸೀಲ್ದಾರ್ ಇಲ್ಲವೇ ತಾಲ್ಲೂಕ್ ಪಂಚಾಯತ್ ನ ಇಒ-ಈ ಮೂವರಿಗೆ ಲಾಗಿನ್ ಆಗುತ್ತದೆ. ಅದಾದ ಬಳಿಕ ಬ್ಯಾಂಕ್ ಖಾತೆದಾರ ಗೃಹಿಣಿಯ ಹೆಸರನ್ನು ಆಕೆಯ ಪಡಿತರ ಚೀಟಿಯೊಂದಿಗೆ ತಾಳೆ ಮಾಡಲಾಗುತ್ತದೆ. ಎರಡರಲ್ಲಿರುವ ಹೆಸರು ಮತ್ತು ವಿವರಗಳು ತಾಳೆ ಹೊಂದಿದರೆ ಅವರು ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿ ಎಂಬ ಆದೇಶ ಮನೆ ತಲುಪುತ್ತದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ