Davanagere; ಬೆಲೆಯೇರಿಕೆ ನಿಯಂತ್ರಿಸುವ ಭರವಸೆ ಕಾಂಗ್ರೆಸ್ ನೀಡಿಲ್ಲ, ಅದು ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುತ್ತದೆ: ಹೆಚ್ ಕೆ ಪಾಟೀಲ್, ಸಚಿವ

Davanagere; ಬೆಲೆಯೇರಿಕೆ ನಿಯಂತ್ರಿಸುವ ಭರವಸೆ ಕಾಂಗ್ರೆಸ್ ನೀಡಿಲ್ಲ, ಅದು ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುತ್ತದೆ: ಹೆಚ್ ಕೆ ಪಾಟೀಲ್, ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 15, 2023 | 1:08 PM

ಆರ್ ಎಸ್ ಎಸ್ ಗೆ ನೀಡಿರುವ ಜಮೀನನ್ನು ಕಾಂಗ್ರೆಸ್ ಸರ್ಕಾರ ವಾಪಸ್ಸು ಪಡೆಯಲು ನಿರ್ಧರಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡಲಿಲ್ಲ.

ದಾವಣಗೆರೆ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಹೆಚ್ ಕೆ ಪಾಟೀಲ್ (HK Patil), ಕಾಂಗ್ರೆಸ್ ಪಕ್ಷ ನಿಯಂತ್ರಿಸುವ ಬಗ್ಗೆ ಭರವಸೆ ನೀಡಿ ಅಧಿಕಾರಕ್ಕೆ ಬಂದಿಲ್ಲ, ತಪ್ಪು ಪ್ರಶ್ನೆ ಮತ್ತು ತಪ್ಪು ಉತ್ತರ ಎರಡೂ ಸರಿಯಲ್ಲ, ಬೆಲೆಯೇರಿಕೆಯೊಂದಿಗೆ (price rice) ಏಗಲು ಸಹಾಯವಾಗುವ ಹಾಗ ಗೃಹ ಲಕ್ಷ್ಮಿ (Gruha Lakshmi) ಯೋಜನೆಯನ್ನು ಜಾರಿಗೆ ತರಲಾಗಿದೆ, ಯೋಜೆನಯಡಿ ಪ್ರತಿ ತಿಂಗಳು ಸಿಗುವ ರೂ. 2,000 ಹಣದಿಂದ ಗೃಹಿಣಿಯರು ಮನೆಯ ಖರ್ಚುವೆಚ್ಚಗಳನನ್ನು ಸರಿದೂಗಿಸಬಹುದು ಎಂದು ಹೇಳಿದರು. ಕೇಂದ್ರ ಸರಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಪಾಲಿಸಿಗಳಿಂದ ಹಣದುಬ್ಬರ (inflation) ಉಂಟಾಗುತ್ತದೆ. ಡೀಸೆಲ್, ಪೆಟ್ರೋಲ್, ಅನಿಲ ಸಿಲಿಂಡರ್, ಖಾದ್ಯ ತೈಲ ಮೊದಲಾದವುಗಳ ಬೆಲೆ ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರಲ್ಲ ಅದು ಕೇಂದ್ರ ಸರ್ಕಾರ ಹತೋಟಿಯಲ್ಲಿರುತ್ತದೆ ಎಂದು ಪಾಟೀಲ್ ಹೇಳಿದರು. ಆರ್ ಎಸ್ ಎಸ್ ಗೆ ನೀಡಿರುವ ಜಮೀನನ್ನು ಕಾಂಗ್ರೆಸ್ ಸರ್ಕಾರ ವಾಪಸ್ಸು ಪಡೆಯಲು ನಿರ್ಧರಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡದೆ ಸಂಬಂಧಪಟ್ಟ ಸಚಿವರು ಪ್ರತಿಕ್ರಿಯಿಸುತ್ತಾರೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ