Jarkiholi Vs Hebbalkar: ಶಾಸಕಿಯೇ ಮೈದಾನ ಖುಲ್ಲಾ ಹೈ ಅಂತ ಸವಾಲೆಸುದಿರುವುದರಿಂದ ಮೈದಾನಕ್ಕಿಳಿದಿರುವೆ: ರಮೇಶ್ ಜಾರಕಿಹೊಳಿ
ಖುದ್ದು ಶಾಸಕಿಯೇ ಮೈದಾನ್ ಖುಲ್ಲಾ ಹೈ ಅಂತ ಸವಾಲೆಸೆದಿರುವುದರಿಂದ ತಾವು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುವುದಾಗಿ ಅವರು ಹೇಳಿದರು.
ಬೆಳಗಾವಿ: ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ನಗರದ ರಾಜಹಂಸಗಢ್ ನಲ್ಲಿ ನಿರ್ಮಿಸಲಾಗಿರುವ ಮತ್ತು ಈಗಾಗಲೇ ಲೋಕಾರ್ಪಣೆ ಮಾಡಿರುವ ಶಿವಾಜಿ ಪ್ರತಿಮೆಯನ್ನು ಮತ್ತೊಮ್ಮೆ ಅನಾವರಣ ಮಾಡಿದ್ದು ಮುಖ್ಯಮಂತ್ರಿ ಬಸವರಾ ಎಸ್ ಬೊಮ್ಮಾಯಿ (Basavaraj S Bommai) ಅವರು ಹೇಳಿದ ಹಾಗೆ ಹಾಸ್ಯಾಸ್ಪದವೇ ಸರಿ. ಹೆಬ್ಬಾಳ್ಕರ್ ವಿರುದ್ಧ ಯುದ್ಧ ಸಾರಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಅವರಿಗೆ ಮತ್ತಷ್ಟು ಅಸ್ತ್ರಗಳು ಸಿಕ್ಕಂತಾಗಿದೆ. ವಿಜಯ ಸಂಕಲ್ಪ ಯಾತ್ರೆ ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿರುವುದರಿಂದ ಉತ್ಸಾಹಿತರಾಗಿರುವ ರಮೇಶ್ ಜಾರಕಿಹೊಳಿ ಅವರು ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ, ಹೆಬ್ಬಾಳ್ಕರ್ ಒಬ್ಬ ಮಹಿಳೆ ಆಗಿರುವುದರಿಂದ ಎಚ್ಚರಿಕೆಯಿಂದ ಮಾತಾಡುತ್ತಿದ್ದೇನೆ ಎಂದರು. ಖುದ್ದು ಶಾಸಕಿಯೇ ಮೈದಾನ್ ಖುಲ್ಲಾ ಹೈ ಅಂತ ಸವಾಲೆಸುದುರರುವುದರಿಂದ ತಾವು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುವುದಾಗಿ ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ