ಅಪಘಾತದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಗಾಯಗೊಂಡಿದ್ದು ಗೊತ್ತಾಗುತ್ತಿದ್ದಂತೆಯೇ ಆಸ್ಪತ್ರೆಗೆ ಧಾವಿಸಿದ ಪತಿ ರವೀಂದ್ರ ಹೆಬ್ಬಾಳ್ಕರ್

|

Updated on: Jan 14, 2025 | 1:47 PM

ರವೀಂದ್ರ ಹೆಬ್ಬಾಳ್ಕರ್ ಅಪರೂಪಕ್ಕೊಮ್ಮೆ ಜನರ ಕಣ್ಣಿಗೆಬಿದ್ದರೂ ಬೆಳಗಾವಿ ನಗರದಲ್ಲಿ ಸಾಕಷ್ಟು ಪರಿಚಿತರು ಅನ್ನೋದು ಆಸ್ಪತ್ರೆ ಬಳಿ ಜನ ಮತ್ತು ಸಿಬ್ಬಂದಿ ಅವರನ್ನು ಸುತ್ತುವರಿಯುವುದನ್ನು ನೋಡಿದರೆ ಗೊತ್ತಾಗುತ್ತದೆ. ರವೀಂದ್ರ ಬಂದಿರುವ ವಿಷಯ ತಿಳಿದು ಆಸ್ಪತ್ರೆಯ ವೈದ್ಯರು ಸಹ ಧಾವಿಸಿ ಬಂದು ಅವರೊಂದಿಗೆ ಮಾತಾಡುತ್ತಾ ಮೇಡಂ ಆರಾಮಾಗಿದ್ದಾರೆ, ಆತಂಕಪಡಬೇಕಿಲ್ಲ ಎನ್ನುತ್ತಾರೆ.

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಾರು ಅಪಘಾತಕ್ಕೊಳಗಾಗಿ ಅವರು ಮತ್ತು ಸಹೋದರ ಚನ್ನರಾಜ್ ಹಟ್ಟಿಹೊಳಿ ಆಸ್ಪತ್ರೆ ಸೇರಿರುವುದು ಕುಟುಂಬಸ್ಥರು ಮತ್ತು ಬೆಂಬಲಿಗರಲ್ಲಿ ಆತಂಕವನ್ನು ಸೃಷ್ಟಿಸಿದೆ. ಸುದ್ದಿ ಗೊತ್ತಾಗುತ್ತಿದ್ದಂತೆಯೇ ಸಚಿವೆಯ ಪತಿ ರವೀಂದ್ರ ಹೆಬ್ಬಾಳ್ಕರ್ ಆಸ್ಪತ್ರೆಗೆ ದೌಡಾಯಿಸಿದರು. ರವೀಂದ್ರ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುವುದಿಲ್ಲ. ಆದರೆ ಅಪಘಾತದಲ್ಲಿ ಪತ್ನಿ ಗಾಯಗೊಂಡಿರುವ ಸುದ್ದಿ ಕಿವಿಗೆ ಬಿದ್ದ ಕೂಡಲೇ ಆಸ್ಪತ್ರೆಗೆ ಆಗಮಿಸಿದರು. ಆಸ್ಪತ್ರೆಯ ಮುಂಭಾಗದಲ್ಲಿ ಕಾರಿಂದ ಇಳಿದು ಅವರು ಒಳಗಡೆ ನಡೆದು ಬರುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಖಾಸಗಿ ಆಸ್ಪತ್ರೆಯೊಂದಕ್ಕೆ ಆಗಮಿಸಿರುವ ಸಿಸಿಟಿವಿ ದೃಶ್ಯಗಳು ಟಿವಿ9ಗೆ ಲಭ್ಯ!