ಲಕ್ಷ್ಮಿ ಪೂಜೆಗಾಗಿ ಬಾಲಚಂದ್ರರ ಮನೆಯಲ್ಲಿ ಒಂದುಗೂಡಿದ ಜಾರಕಿಹೊಳಿ ಕುಟುಂಬದ ಸದಸ್ಯರು

Edited By:

Updated on: Oct 25, 2022 | 11:17 AM

ಬಾಲಚಂದ್ರ ಅವರ ಮನೆಯಲ್ಲಿ ನಡೆಯುತ್ತಿರುವ ಪೂಜೆಯಲ್ಲಿ ರಮೇಶ್, ಲಖನ್ ಮತ್ತು ಅವರ ಮಕ್ಕಳಲ್ಲದೆ, ಸತೀಶ್ ಜಾರಕಿಹೊಳಿ ಅವರ ಮಗ ರಾಹುಲ್ ಮಗ ಸಹ ಭಾಗವಹಿಸಿದ್ದಾನೆ.

ಬೆಳಗಾವಿ: ನಾವು ಆಚರಿಸುವ ಹಬ್ಬಗಳ (festivals) ವಿಶೇಷತೆಯೇ ಅದು ಮಾರಾಯ್ರೇ. ದಾಯಾದಿಗಳು, ಬಂಧುಬಳಗ ಅಷ್ಟ್ಯಾಕೆ ಸಮುದಾಯಗಳ ನಡುವಿನ ವೈಷಮ್ಯವನ್ನೂ ಅವು ಮರೆಸಿ ಒಂದುಗೂಡಿಸುತ್ತವೆ. ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ (Jarkiholi) ಒಂದು ದೊಡ್ಡ ಮತ್ತು ಪ್ರತಿಷ್ಠಿತ ಕುಟುಂಬ. ಕುಟುಂಬ ಸದಸ್ಯರ ರಾಜಕೀಯ ಅಭಿರುಚಿ (political allegiance), ನಿಷ್ಠೆಗಳು ಬೇರೆ ಬೇರೆಯಾಗಿದ್ದರೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಹೋದರರಾಗಿರುವ ಬಾಲಚಂದ್ರ, ರಮೇಶ್, ಸತೀಶ್ ಮತ್ತು ಲಖನ್ ಜಾರಕಿಹೊಳಿ ಕುಟುಂಬಗಳು ಜಗ್ಗೂಡಿ ಲಕ್ಷ್ಮಿ ಪೂಜೆ ನಡೆಸುತ್ತಾರೆ. ಬಾಲಚಂದ್ರ ಅವರ ಮನೆಯಲ್ಲಿ ನಡೆಯುತ್ತಿರುವ ಪೂಜೆಯಲ್ಲಿ ರಮೇಶ್, ಲಖನ್ ಮತ್ತು ಅವರ ಮಕ್ಕಳಲ್ಲದೆ, ಸತೀಶ್ ಜಾರಕಿಹೊಳಿ ಅವರ ಮಗ ರಾಹುಲ್ ಮಗ ಸಹ ಭಾಗವಹಿಸಿದ್ದಾನೆ.