Kantara: ‘ಮೊದಲು ಧರ್ಮಸ್ಥಳಕ್ಕೆ ಹೋಗು..’: ರಿಷಬ್ ಶೆಟ್ಟಿಗೆ ಎಲ್ಲರಿಂದ ಈ ಸಲಹೆ ಸಿಗಲು ಕಾರಣ ಏನು?
Dharmasthala Temple: ‘ಕಾಂತಾರ’ ಚಿತ್ರ ಶುರು ಆಗುವುದಕ್ಕೂ ಮುನ್ನ ರಿಷಬ್ ಶೆಟ್ಟಿಗೆ ಎಲ್ಲರೂ ಸಲಹೆ ನೀಡಿದ್ದರು. ಆ ವಿಚಾರದ ಬಗ್ಗೆ ಅವರೀಗ ಟಿವಿ9 ಜತೆಗಿನ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಭೂತಾರಾಧನೆಯ ವಿಷಯವನ್ನು ಇಟ್ಟುಕೊಂಡು ಮಾಡಿದ ‘ಕಾಂತಾರ’ (Kantara) ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಈ ಸಿನಿಮಾದ ಬಗ್ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಜನರ ಭಾವನೆಗೆ ಸಂಬಂಧಿಸಿದ ವಿಚಾರ ಭೂತ ಕೋಲ (Bhoota Kola). ಹಾಗಾಗಿ ದೈವ ನರ್ತಕನ ಪಾತ್ರ ಮಾಡುವುದಕ್ಕೂ ಮುನ್ನ ಒಮ್ಮೆ ಧರ್ಮಸ್ಥಳಕ್ಕೆ ಹೋಗಿ ಅನುಮತಿ ಕೇಳಬೇಕು ಎಂದು ರಿಷಬ್ ಶೆಟ್ಟಿಗೆ (Rishab Shetty) ಎಲ್ಲರೂ ಸಲಹೆ ನೀಡಿದ್ದರು. ಆ ವಿಚಾರದ ಬಗ್ಗೆ ಅವರೀಗ ಟಿವಿ9 ಜತೆಗಿನ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಚಿತ್ರಕ್ಕೆ ಅವರೇ ನಿರ್ದೇಶನ ಮಾಡಿದ್ದು, ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆ ಬಂಡವಾಳ ಹೂಡಿದೆ.
Published on: Oct 25, 2022 09:45 AM
Latest Videos