Video: ಕಣ್ಮನ ಸೆಳೆದ ಲಾಲ್​ ಬಾಗ್​ ಫ್ಲವರ್​ ಶೋ: ಹೇಗಿದೆ ನೋಡಿ ಜನರ ಸೆಲ್ಫಿ ಕ್ರೇಜ್​

|

Updated on: Aug 06, 2023 | 7:59 PM

ಫಲಪುಷ್ಟ ಪ್ರದರ್ಶನ ಇಂದು ಮೂರನೇ ದಿನಕ್ಕೆ ಕಾಲಿರಿಸಿದೆ. ಸಿಟಿ ಮಂದಿ ಬಗೆಬಗೆ ಹೂಗಳನ್ನ ಕಣ್ತುಂಬಿಕೊಂಡು ದಿಲ್ ಖುಷ್ ಆಗಿದ್ದಾರೆ. ಹಿಂದೆಂದೂ ನೋಡದ ಹೂಗಳನ್ನ ನೋಡಿ, ಪುಳಕಿತರಾಗಿದ್ದು, ಸೆಲ್ಫಿಗೆ ಪೋಸ್​ ನೀಡಿದ್ದಾರೆ.  

ಬೆಂಗಳೂರು, ಆಗಸ್ಟ್​ 06: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಲಾಲ್​ ಬಾಗ್​ನಲ್ಲಿ ಆಯೋಜಿಸಿರುವ ಫ್ಲವರ್ ಶೋ (Lalbagh flower show) ಝಗಮಗಿಸುತ್ತಿದೆ. ಫಲಪುಷ್ಟ ಪ್ರದರ್ಶನ ನೋಡೋದಕ್ಕೆ ಸಿಟಿ ಜನರು ಮುಗಿಬೀಳುತ್ತಿದ್ದಾರೆ. ಕುಟುಂಬ ಸಮೇತರಾಗಿ ಬರುತ್ತಿರುವ ಜನ ಬಗೆ ಬಗೆಯ ಹೂವುಗಳ ಕಣ್ತುಂಬಿಕೊಳ್ಳುತ್ತಿದ್ದಾರೆ. ಇಂದು ಭಾನುವಾರ ಆಗಿರುವುದರಿಂದ ಹೆಚ್ಚು ಜನರು ಲಾಲ್​ಬಾಗ್​ನತ್ತ ಆಗಮಿಸಿದ್ದಾರೆ. ಶಾಲೆಗಳಿಗೆ ರಜೆ ಇರುವ ಹಿನ್ನೆಲೆಯಲ್ಲಿ, ಶಾಲಾ ಮಕ್ಕಳು ಸಹ ಫ್ಲವರ್ ಶೋವನ್ನ ಆನಂದಿಸಿದ್ದಾರೆ. ಹಿಂದೆಂದೂ ನೋಡದ ಹೂಗಳನ್ನ ನೋಡಿ, ಪುಳಕಿತರಾಗಿದ್ದು, ಸೆಲ್ಫಿಗೆ ಪೋಸ್​ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.