ಸಕಲೇಶಪುರದ ಆನೆಮಹಲ್ ಬಳಿ ಭೂಕುಸಿತದ ಆತಂಕ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ

Edited By:

Updated on: Jul 09, 2026 | 7:35 PM

ಮುಖ್ಯಾಂಶಗಳು

  • ಹಾಸನ ಜಿಲ್ಲೆಯ ಸಕಲೆಶಪುರದಲ್ಲೂ ಭೂಕುಸಿತದ ಆತಂಕ
  • ಆನೆಮಹಲ್ ಬಳಿ ಆತಂಕದಲ್ಲಿರುವ ಹತ್ತಾರು ಕುಟುಂಬಗಳು
  • ಭರವಸೆ ಈಡೇರಿಸಿದ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ

ಹಾಸನ ಜಿಲ್ಲೆಯ ಸಕಲೇಶಪುರದ ಆನೆಮಹಲ್ ಬಳಿ ಭೂಕುಸಿತದ ಭೀತಿಯಲ್ಲಿ ಹತ್ತಾರು ಕುಟುಂಬಗಳು ಆತಂಕದಲ್ಲಿ ವಾಸಿಸುತ್ತಿವೆ. ಕಳೆದ ವರ್ಷ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ನೀಡಿದ ಭರವಸೆಗಳು ಈಡೇರಿಲ್ಲ. ಮಳೆ ಹೆಚ್ಚಾದಂತೆ ಜೀವ ಭಯ ಕಾಡುತ್ತಿದ್ದರೂ, ಸ್ಥಳಾಂತರಕ್ಕೆ ಸೂಕ್ತ ವ್ಯವಸ್ಥೆ ಇಲ್ಲದೆ ಜನರು ತಮ್ಮ ಮನೆ ಬಿಟ್ಟು ಹೋಗಲು ನಿರಾಕರಿಸುತ್ತಿದ್ದಾರೆ. ಸರ್ಕಾರ ಕೂಡಲೇ ಸ್ಪಂದಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಹಾಸನ, ಜುಲೈ 09: ಜಿಲ್ಲೆಯ ಸಕಲೇಶಪುರ ತಾಲೂಕು ಪ್ರದೇಶದಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಭೂಕುಸಿತದ ಆತಂಕ ಎದುರಾಗುತ್ತದೆ. ಕೇರಳದಲ್ಲಿ ಸಂಭವಿಸಿದ ಭೂದುರಂತದ ಹಿನ್ನೆಲೆಯಲ್ಲಿ, ಸಕಲೇಶಪುರದ ಆನೆಮಹಲ್ ಬಳಿಯ ಹತ್ತಾರು ಕುಟುಂಬಗಳು ಜೀವಭಯದಲ್ಲಿವೆ. ಕಳೆದ ವರ್ಷ ಜಿಲ್ಲಾಡಳಿತವು ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿತ್ತು. ಆದರೆ, ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಮಳೆ ಆರಂಭವಾದಾಗ ಮನೆ ಖಾಲಿ ಮಾಡಲು ಸೂಚನೆ ನೀಡಲಾಗುತ್ತಿದೆ. ಪರ್ಯಾಯ ವ್ಯವಸ್ಥೆ ಇಲ್ಲದೆ ಎಲ್ಲಿಗೆ ಹೋಗುವುದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us