ಮಧ್ಯರಾತ್ರಿ ಊಟ ಆರ್ಡರ್, ಕೆಳಗೆ ಬನ್ನಿ ಅಂದ್ರೂ ಬಾರದ ಗ್ರಾಹಕ, ತಾನೇ ತಿಂದ ಜೊಮ್ಯಾಟೊ ಏಜೆಂಟ್
ಗ್ರಾಹಕರೊಬ್ಬರು ತಡರಾತ್ರಿ ಊಟ ಆರ್ಡರ್ ಮಾಡಿದ್ದರು, ಮನೆಯ ಬಳಿ ಹೋಗಿ ಕೆಳಗೆ ಬನ್ನಿ ಎಂದರೆ ಗ್ರಾಹಕರು ಬಾರದಿದ್ದಕ್ಕೆ ಬೇಸರಗೊಂಡು ಜೊಮ್ಯಾಟೊ ಡೆಲಿವರಿ ಏಜೆಂಟ್ ಆ ಊಟವನ್ನು ತಾವೇ ತಿಂದಿರುವ ವಿಡಿಯೋ ವೈರಲ್ ಆಗಿದೆ. ಇದನ್ನು ಖುದ್ದಾಗಿ ಅಂಕುರ್ ಠಾಕೂರ್ ಎಂಬ ಡೆಲಿವರಿ ಏಜೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಅವರು ಮಧ್ಯರಾತ್ರಿ 2.30ರ ವೇಳೆಗೆ ಆಹಾರ ಆರ್ಡರ್ ಮಾಡಿದ್ದರು, ರಾತ್ರಿ ಹೊತ್ತು ಬೈಕ್ ಹೊರಗೆ ನಿಲ್ಲಿಸಿ ಮೇಲಿನ ಮಹಡಿವರೆಗೆ ನಡೆದುಕೊಂಡು ಹೋದರೆ ವಾಪಸ್ ಬರುವಷ್ಟರಲ್ಲಿ ಬೈಕ್ ಅಲ್ಲೇ ಇರುತ್ತೆ ಎಂಬುದಕ್ಕೆ ಯಾವುದೇ ನಂಬಿಕೆಯಿಲ್ಲ ಹೀಗಾಗಿ ಬೈಕ್ ಕಳವಾಗುವ ಭಯದಲ್ಲಿ, ನೀವೇ ಕೆಳಗೆ ಬಂದು ಊಟ ತೆಗೆದುಕೊಂಡು ಹೋಗಿ ಎಂದಿದ್ದಕ್ಕೆ, ಗ್ರಾಹಕ ನಾನು ಹಣ ಕೊಟ್ಟು ಆರ್ಡರ್ ಮಾಡಿದ್ದೇನೆ, ಮನೆ ಬಾಗಿಲವರೆಗೆ ತಂದು ಕೊಡುವುದು ನಿನ್ನ ಕರ್ತವ್ಯ ಎಂದು ಗದರಿದ್ದಾರೆ ಹಾಗಾಗ ಕೋಪಗೊಂಡ ಏಜೆಂಟ್ ಆ ಊಟವನ್ನು ತಾವೇ ಮಾಡಿರುವುದರ ಜತೆಗೆ ವಿಡಿಯೋವನ್ನು ಕೂಡ ಮಾಡಿದ್ದಾರೆ.
ಮಧ್ಯರಾತ್ರಿ ಆರ್ಡರ್ ಮಾಡಿದಾಗ ಗ್ರಾಹಕರು ಕೂಡ ಸ್ವಲ್ಪ ಫ್ಲೆಕ್ಸಿಬಲ್ ಆಗಿ ಇರಬೇಕು, ನಮ್ಮ ಕಷ್ಟವನ್ನು ಕೂಡ ಅರ್ಥಮಾಡಿಕೊಂಡರೆ ಒಳಿತು ಎಂದಿದ್ದಾರೆ. ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆಗಳುವ್ಯಕ್ತವಾಗಿವೆ. ಕೆಲವರು ನೀವು ಕೆಲಸಕ್ಕೆ ಸೇರುವ ಮುನ್ನ ಇದೆಲ್ಲವನ್ನೂ ಯೋಚಿಸಬೇಕಿತ್ತು, ರೂಲ್ಸ್ ಪ್ರಕಾರ ಮನೆಗೆ ಬಂದು ಡೆಲಿವರಿ ಮಾಡಬೇಕು ಎಂದು ಒಬ್ಬರು ಹೇಳಿದ್ದರೆ, ಮತ್ತೊಬ್ಬರು ನೀವು ಊಟವನ್ನು ಗೇಟ್ನಲ್ಲಿ ಇಟ್ಟು ಹೊರಡಬೇಕಿತ್ತು ಎಂದು ಬರೆದಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ