Karnataka Budget Session: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ, ಚರ್ಚೆಗೆ ಅವಕಾಶ ಬೇಕು: ಆರ್ ಅಶೋಕ, ವಿಪಕ್ಷ ನಾಯಕ
Karnataka Budget Session: ಮಹಿಳೆಯ ಬೆತ್ತಲೆ ಪ್ರಕರಣ, ಹಾವೇರಿಯಲ್ಲಿ ಸಾಮೂಹಿಕ ಅತ್ಯಾಚಾರ, ಕುಕ್ಕರ್ ಬಾಂಬ್ ಬ್ಲಾಸ್ಟ್ ಮೊದಲಾದ ಘಟನೆಗಳು ರಾಜ್ಯದ ಜನರನ್ನು ಆತಂಕಕ್ಕೆ ದೂಡಿವೆ, ಸರ್ಕಾರ ಬದುಕಿದೆಯೋ ಸತ್ತಿದೆಯೋ ಅಂತ ಜನರು ಅಂದುಕೊಳ್ಳುವ ಮಟ್ಟಿಗೆ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಅಶೋಕ ಹೇಳಿದರು.
ಬೆಂಗಳೂರು: ನಿನ್ನೆ ರಾಜ್ಯಪಾಲರ ಭಾಷಣದ ನಂತರ ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನದ (Karnataka Budget Session) ಎರಡನೇ ದಿನದ ಕಾರ್ಯಕಲಾಪಗಳು ಆರಂಭಗೊಂಡಿವೆ. ಮೊದಲಿಗೆ ಮಾತಾಡುವ ಅವಕಾಶ ಪಡೆದ ವಿರೋಧ ಪಕ್ಷದ ನಾಯಕ ಆರ್ ಅಶೋಕ (R Ashoka) ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಸಭಾಧ್ಯಕ್ಷ ಯುಟಿ ಖಾದರ್ (UT Khader) ಅವರಿಗೆ ಮನವಿ ಮಾಡಿದರು. ವಿಷಯ ಬೆಳಗಾವಿ ಅಧುವೇಶನದಲ್ಲೇ ಚರ್ಚೆಯಾಗಬೇಕಿತ್ತು ಆದರೆ ತಾವು ವಿರೋಧ ಪಕ್ಷದವರ ಎತ್ತಿದ ಪ್ರಶ್ನೆಗೆ ಗಮನ ನೀಡದೆ ಆಡಳಿತ ಪಕ್ಷದ ಕಡೆ ವಾಲಿದಿರಿ ಎಂದು ಹೇಳಿದ ಆಶೋಕ, ಮಹಿಳೆಯ ಬೆತ್ತಲೆ ಪ್ರಕರಣ, ಹಾವೇರಿಯಲ್ಲಿ ಸಾಮೂಹಿಕ ಅತ್ಯಾಚಾರ, ಕುಕ್ಕರ್ ಬಾಂಬ್ ಬ್ಲಾಸ್ಟ್ ಮೊದಲಾದ ಘಟನೆಗಳು ರಾಜ್ಯದ ಜನರನ್ನು ಆತಂಕಕ್ಕೆ ದೂಡಿವೆ, ಸರ್ಕಾರ ಬದುಕಿದೆಯೋ ಸತ್ತಿದೆಯೋ ಅಂತ ಜನರು ಅಂದುಕೊಳ್ಳುವ ಮಟ್ಟಿಗೆ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದರು. ಕಳೆದ ಬಾರಿಯಂತೆ ಆ ಕಡೆ ತಿರುಗದೆ ತಮ್ಮ ಕಡೆ ತಿರುಗಿ ಅಂತ ಅಶೋಕ ಹೇಳುವಾಗ ಉತ್ತರಿಸಲು ಎದ್ದುನಿಂತ ಗೃಹ ಸಚಿವ ಜಿ ಪರಮೇಶ್ವರ್, ಅಧ್ಯಕ್ಷರು ಎಡ ಬಲ ಯಾವ ಕಡೆಯೂ ತಿರುಗೋದು ಬೇಡ ನೇರವಾಗಿ ನೋಡಲಿ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ