Bomb Threat Mails: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕುಲಗೆಟ್ಟುಹೋಗಿದೆ: ಹೆಚ್ ಡಿ ಕುಮಾರಸ್ವಾಮಿ
Bomb Threat Mails: ಜನರು ಭಯದಿಂದ ಜೀವಿಸುವಂಥ ಕೃತಕ ವಾತಾವರಣವನ್ನು ಸೃಷ್ಟಿ ಮಾಡಲು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನಿಸುತ್ತಿವೆ ಅಂತ ಕುಮಾರಸ್ವಾಮಿ ಯಾವ ಅರ್ಥದಲ್ಲಿ ಹೇಳಿದರು ಅನ್ನೋದು ಪ್ರಾಯಶಃ ಕನ್ನಡಿಗರಿಗೆ ಅರ್ಥವಾಗಲಿಕ್ಕಿಲ್ಲ. ಯಾವುದೋ ಸಂಸ್ಥೆಯವ ಮೇಲ್ ಗಳನ್ನು ಕಳಿಸಿದ್ದಾನೆ ಅಂತ ಅವರೇ ಹೇಳುತ್ತಾರೆ. ಬಾಂಬ್ ಬೆದರಿಕೆಯ ಹುಸಿಮೇಲ್ ಗಳ ಹಿನ್ನೆಲೆಯಲ್ಲಿ ಅವರು ಕೃತಕ ಅಂತ ಹೇಳಿದ್ದರೆ, ಸರ್ಕಾರವನ್ನು ಕಟಕಟೆಯಲ್ಲಿ ನಿಲ್ಲಿಸುವ ಅವರ ಉದ್ದೇಶವಾದರೂ ಏನು?
ಬೆಂಗಳೂರು: ಬೆಂಗಳೂರು ನಗರದ 40 ಕ್ಕೂ ಶಾಲೆಗಳಿಗೆ ಬಾಂಬ್ ಬೆದರಿಕೆಯ (bomb threat) ಮೇಲ್ ಗಳು ಸಿಕ್ಕ ಸುದ್ದಿ ಹೊರಬಿದ್ದ ಬಳಿಕ ನಗರದ ಹಲವಾರು ಭಾಗಗಳಲ್ಲಿ ಭೀತಿ ಮತ್ತು ಗೊಂದಲಮಯ ವಾತಾವರಣ ಸೃಷ್ಟಿಯಾಗಿತ್ತು. ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy), ಘಟನೆಯ ಕುರಿತು ತೀಕ್ಷ್ನವಾದ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ ಸರ್ಕಾರ (Congress government) ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕುಲಗೆಟ್ಟು ಹೋಗಿದೆ, ಸಾರ್ವಜನಿಕರು ಭಯಭೀತಿ ಮತ್ತು ಆತಂಕದಿಂದ ಜೀವನ ನಡೆಸುವ ವಾತಾವರಣ ಸೃಷ್ಟಿಯಾಗಿದೆ ಎಂದು ಹೇಳಿದರು. ಈಮೇಲ್ ಗಳ ಸತ್ಯಾಸತ್ಯತೆಯನ್ನ ಆದಷ್ಟು ಬೇಗ ಪತ್ತೆ ಮಾಡಬೇಕು ಎಂದು ಹೇಳಿದ ಕುಮಾರಸ್ವಾಮಿ ರಾಜ್ಯದ ಜನತೆ ತಮಗೆ ರಕ್ಷಣೆ ಇಲ್ಲವೇನೋ ಎಂಬ ವಿಶ್ವಾಸದ ಕೊರತೆಯೊಂದಿಗೆ ಜೀವಿಸುತ್ತಿದ್ದಾರೆ ಎಂದರು. ಸದನದಲ್ಲಿ ವಿಷಯ ಪ್ರಸ್ತಾಪಿಸಿ ಹೋರಾಟ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ