‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ದೊಡ್ಮನೆಯಿಂದ ಹೊರ ಬಂದ ಜಗದೀಶ್​ ಮೊದಲ ರಿಯಾಕ್ಷನ್

|

Updated on: Oct 18, 2024 | 2:27 PM

ಲಾಯರ್ ಜಗದೀಶ್, ಬಿಗ್​ಬಾಸ್​ನಿಂದ ಎಲಿಮಿನೇಟ್ ಆಗಿದ್ದಾರೆ. ಬಿಗ್​ಬಾಸ್ ಮನೆಗೆ ಹೋದಾಗಿನಿಂದಲೂ ಒಂದರ ಹಿಂದೊಂದರಂತೆ ನಿಯಮಗಳನ್ನು ಮುರಿಯುತ್ತಾ ಸ್ಪರ್ಧಿಗಳ ಮೇಲೆ ಜಗಳವಾಡುತ್ತಾ, ಏಕ ವಚನದಲ್ಲಿ ಮಾತನಾಡುತ್ತಾ ಮನೆಯವರ ಸಿಟ್ಟಿಗೆ ಗುರಿಯಾಗಿದ್ದರು. ಈಗ ಅವರು ಆಡಿಯೋ ಕ್ಲಿಪ್ ಹಂಚಿಕೊಂಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಅವಾಚ್ಯ ಶಬ್ದಗಳ ಬಳಕೆ ಮಾಡಿದ ಆರೋಪದಲ್ಲಿ ಜಗದೀಶ್ ಅವರು ಬಿಗ್ ಬಾಸ್​ನಿಂದ ಹೊರಹೋಗಿದ್ದಾರೆ. ಅವರು ಔಟ್ ಆಗಿದ್ದು ಹೌದೋ ಅಥವಾ ಇಲ್ಲವೋ ಎನ್ನುವ ಕುತೂಹಲ ಅಭಿಮಾನಿಗಳಿಗೆ ಇತ್ತು. ಇದಕ್ಕೆ ಉತ್ತರ ಸಿಕ್ಕಿದೆ. ಅವರು ದೊಡ್ಮನೆಯಿಂದ ಹೊರ ಬಂದಿದ್ದು, ಖಚಿತವಾಗಿದೆ. ಅವರು ಆಡಿಯೋ ರೆಕಾರ್ಡ್​ನ ಹರಿಬಿಟ್ಟಿದ್ದು ಇದರಲ್ಲಿ ಬಿಗ್ ಬಾಸ್ ಅನುಭವದ ಬಗ್ಗೆ ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.