ಉಪ ಚುನಾವಣೆ ನಡೆಯುವ ಸಂಡೂರಲ್ಲೂ ಒಂದು ಮನೆ ಮಾಡಿದ ಗಾಲಿ ಜನಾರ್ಧನ ರೆಡ್ಡಿ
ವಿಧಾನಸಭಾ ಚುನಾವಣೆ ಸಮಯದಲ್ಲಿ ಜನಾರ್ಧನ ರೆಡ್ಡಿ ಮತ್ತು ಅವರ ಸಹೋದರ ಗಾಲಿ ಸೋಮಶೇಖರ್ ರೆಡ್ಡಿ ನಡುವಿನ ಸಂಬಂಧ ಹಳಸಿತ್ತು. ಈಗ ಬಾಂಧವ್ಯ ಸರಿಹೋಗಿದ್ದು ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಬಳ್ಳಾರಿಯ ಮಾಜಿ ಶಾಸಕ ಆಗಮಿಸಿದ್ದರು. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ನಾರಾ ಭರತ್ ರೆಡ್ಡಿ ವಿರುದ್ಧ ಸೋಮಶೇಖರ್ ಸೋತಿದ್ದರು.
ಬಳ್ಳಾರಿ: ಮಾಜಿ ಸಚಿವ ಮತ್ತು ಹಾಲಿ ಶಾಸಕ ಗಾಲಿ ಜನಾರ್ಧನ ರೆಡ್ಡಿಯವರು ಚುನಾವಣೆ ನಡೆಯುವ ಸ್ಥಳಗಳಲೆಲ್ಲ ಮನೆ ಮಾಡುವಂತೆ ಕಾಣುತ್ತದೆ ಮಾರಾಯ್ರೇ. ವಿಧಾನಸಭಾ ಚುನಾವಣೆ ನಡೆದಾಗ ಅವರು ಗಂಗಾವತಿಯಿಂದ ಸ್ಪರ್ಧಿಸಿದ್ದರು ಮತ್ತು ಅಲ್ಲೇ ಮನೆ ಮಾಡಿದ್ದರು. ಆಫ್ ಕೋರ್ಸ್ ಆಗ ಅವರಿಗೆ ಬಳ್ಳಾರಿಯಲ್ಲಿ ಕಾಲಿಡುವ ಅನುಮತಿ ಇರಲಿಲ್ಲ. ಆದರೆ, ಬಿಜೆಪಿ ಸೇರಿದ ಮೇಲೆ ಅನುಮತಿ ಸಿಕ್ಕಿದೆ. ಈಗ ಸಂಡೂರುನಲ್ಲಿ ಉಪ ಚುನಾವಣೆ ನಡೆಯುತ್ತಿರುವುದರಿಂದ ಅವರು ಇಲ್ಲೂ ಒಂದು ಮನೆ ಇಂದು ಪತ್ನಿ ಜೊತೆ ಗೃಹಪ್ರವೇಶ ಮಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಗಾಲಿ ಜನಾರ್ಧನ ರೆಡ್ಡಿ ಜನ್ಮದಿನ ಪ್ರಯುಕ್ತ ಬಳ್ಳಾರಿಯಲ್ಲಿ ಬೈಕ್ ಱಲಿ, ಚಾಲನೆ ನೀಡಿದ್ದು ರೆಡ್ಡಿ ಧರ್ಮಪತ್ನಿ ಅರುಣ ಲಕ್ಷ್ಮಿ