ಗಾಲಿ ಜನಾರ್ಧನ ರೆಡ್ಡಿ ಜನ್ಮದಿನ ಪ್ರಯುಕ್ತ ಬಳ್ಳಾರಿಯಲ್ಲಿ ಬೈಕ್ ಱಲಿ, ಚಾಲನೆ ನೀಡಿದ್ದು ರೆಡ್ಡಿ ಧರ್ಮಪತ್ನಿ ಅರುಣ ಲಕ್ಷ್ಮಿ
ಅರು ನೂರಕ್ಕೂ ಹೆಚ್ಚು ಬೈಕ್ ಗಳು ಱಲಿಯಲ್ಲಿ ಭಾಗವಹಿಸಿದ್ದವು ಮತ್ತು ಪ್ರತಿಯೊಂದು ಬೈಕ್ ಗೆ ರೂ. 200 ಉಚಿತ ಪೆಟ್ರೋಲ್ ತುಂಬಿಸಲಾಗಿತ್ತು.
ಬಳ್ಳಾರಿ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ಧನ ರೆಡ್ಡಿ (Gali Janardhan Reddy) ಅವರಿಂದು ತಮ್ಮ 56 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಬರ್ತ್ ಡೇ ಪ್ರಯುಕ್ತ ಬಳ್ಳಾರಿ ನಗರದ ಎಲ್ಲ ಪ್ರಮುಖ ಬೀದಿ ಮತ್ತು ರಸ್ತೆಗಳಲ್ಲಿ ರೆಡ್ಡಿಯವರ ಕಟೌಟ್ ಗಳು ರಾರಾಜಿಸುತ್ತಿದ್ದವು ಮತ್ತು ಒಂದು ಬೈಕ್ ಱಲಿಯನ್ನು (bike rally) ಅಯೋಜಿಸಲಾಗಿತ್ತು. ರೆಡ್ಡಿಯವರ ಧರ್ಮಪತ್ನಿ ಅರುಣ ಲಕ್ಷ್ಮಿ (Aruna Lakshmi) ಅವರು ಱಲಿಗೆ ಚಾಲನೆ ನೀಡಿದರು. ಅರು ನೂರಕ್ಕೂ ಹೆಚ್ಚು ಬೈಕ್ ಗಳು ಱಲಿಯಲ್ಲಿ ಭಾಗವಹಿಸಿದ್ದವು ಮತ್ತು ಪ್ರತಿಯೊಂದು ಬೈಕ್ ಗೆ ರೂ. 200 ಉಚಿತ ಪೆಟ್ರೋಲ್ ತುಂಬಿಸಲಾಗಿತ್ತು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos