ಲಾಯರ್ ಜಗದೀಶ್, ಕೆಂಪೇಗೌಡ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳುವ ಮೊದಲು  ಪೊಲೀಸ್ ಮೇಲೆ ರೇಗಿದರು!

ಅರುಣ್​ ಕುಮಾರ್​ ಬೆಳ್ಳಿ

Updated on: Jun 02, 2025 | 7:54 PM

ಲಾಯರ್ ಜಗದೀಶ್ ಒಳಗೆ ಹೋಗುವಾಗ ಅದರೆ ಸಭಾಂಗಣ ಪ್ರವೇಶಿಸುವ ಮೊದಲು ಯಾರೋ ಒಬ್ಬರು ಅವರ ಪರವಾಗಿ ಮಾತಾಡುತ್ತಾ ಪೊಲೀಸ್​​ಗೆ ಏನೋ ಹೇಳಲು ಪ್ರಯತ್ನಿಸುತ್ತಾರೆ ಅಂತ ಕಾಣುತ್ತೆ. ಆಗ ಜಗದೀಶ್ ಹಿಂದಕ್ಕೆ ತಿರುಗಿ ಉಗೀರಿ ಅವನ ಮುಖಕ್ಕೆ ಒಂದಿಷ್ಟು ಅನ್ನುತ್ತಾರೆ. ಪೊಲೀಸ್ ತನ್ನನ್ನು ಅಂಡರ್​ ಎಸ್ಟಿಮೇಟ್ ಮಾಡಿದರು ಎಂಬ ಕೋಪ ಅವರಲ್ಲಿದ್ದಿರಬೇಕು, ಅದರೆ ಪೊಲೀಸ್ ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದರು, ವಿಷಯ ಅಷ್ಟೇ.

ಬೆಂಗಳೂರು, ಜೂನ್ 2: ಲಾಯರ್ ಜಗದೀಶ್ ಇರುವಲ್ಲಿ ರಗಳೆ ಇರಲೇಬೇಕು ಮಾರಾಯ್ರೇ. ಅದನ್ನು ಕನ್ನಡಿಗರು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ (Bigg Boss Kannada reality show) ನೋಡಿದ್ದಾರೆ. ಇವತ್ತು ನಗರದಲ್ಲಿ ಕೆಂಪೇಗೌಡ ಜಯಂತಿ ಅಚರಣೆಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪೂರ್ವಭಾವಿ ಸಭೆಯೊಂದನ್ನು ನಡೆಸಿದರು. ಪ್ರಾಯಶಃ ಕೊಂಚ ತಡವಾಗಿ ಬಂದ ಜಗದೀಶ್ ರನ್ನು ಸಭಾಂಗಣದ ಮುಂಭಾಗದಲ್ಲಿ ನಿಂತಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ತಡೆದು, ಅಹ್ವಾನಿತರ ಲಿಸ್ಟ್​ನಲ್ಲಿ ನಿಮ್ಮ ಹೆಸರಿಲ್ಲ, ಒಳಗೆ ಬಿಡಲ್ಲ ಎಂದಿದ್ದಾರೆ. ಅಷ್ಟು ಸಾಕಿತ್ತು ಲಾಯರ್ ಸಾಹೇಬರಿಗೆ ಪೊಲೀಸ್ ಮೇಲೆ ಕೂಗಾಡಲು! ಅಷ್ಟರಲ್ಲಿ ಶಿವಕುಮಾರ್ ಅಪ್ತ ಸಹಾಯಕರು ಅಲ್ಲಿಗೆ ಬಂದು ಜಗದೀಶ್​ ರನ್ನು ಒಳಗೆ ಕರೆದುಕೊಡು ಹೋಗುತ್ತಾರೆ.

ಇದನ್ನೂ ಓದಿ:  ‘ದರ್ಶನ್ ಫ್ಯಾನ್ಸ್ ಇನ್ಸುರೆನ್ಸ್ ಮಾಡಿಸಿಕೊಂಡು ಬನ್ನಿ’; ಎಚ್ಚರಿಸಿದ ಲಾಯರ್ ಜಗದೀಶ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.