ಬೆಳಗಾವಿಯಲ್ಲಿ ವಕೀಲರು ಪ್ರತಿಭಟನೆ ನಡೆಸಿದ್ದು ಸರ್ಕಾರದ ಗಮನ ಸೆಳೆಯಲೋ ಅಥವಾ ಜನಸಾಮಾನ್ಯರಿಗೆ ತೊಂದರೆ ನೀಡಲೋ?
ದೇಶದಲ್ಲಿ ಪ್ರತಿಭಟನೆ, ಧರಣಿ ಮತ್ತು ಸತ್ಯಾಗ್ರಹಗಳ ವ್ಯಾಖ್ಯಾನ ಬದಲಾಗುತ್ತಿದೆಯೇ ಎಂಬ ಯೋಚನೆ ಜನಸಾಮಾನ್ಯನಿಗೆ ಬಂದಿದ್ದರೆ ಆಶ್ಚರ್ಯವಿಲ್ಲ. ಧರಣಿಗಳು ಕ್ರಮೇಣ ಆರ್ಡರ್ ಆಫ್ ದಿ ಡೇ ಆಗುತ್ತಿವೆ. ಅಣ್ಣಾ ಹಜಾರೆ ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆಸಿದ ನಿರಶನವನ್ನು ಜ್ಞಾಪಿಸಿಕೊಳ್ಳಿ. ಆ ಆಂದೋಳನದ ಗಾಂಭೀರ್ಯತೆ, ಘನತೆ ಈಗಿನ ಪ್ರತಿಭಟನೆಗಳಿಗಿದೆಯೇ?
ಬೆಳಗಾವಿ: ಕಾನೂನನ್ನು ಅರೆದು ಕುಡಿಯುವ ಮತ್ತು ಕಾನೂನು ಪಂಡಿತರೆಂದು (legal experts) ಕರೆಸಿಕೊಳ್ಳುವ ವಕೀಲರು ಬೆಳಗಾವಿಯಲ್ಲಿ ಏನು ಮಾಡುತ್ತಿದ್ದಾರೆ ಅಂತ ಒಮ್ಮೆ ನೋಡಿ. ಚಿಕ್ಕಮಗಳೂರುನಲ್ಲಿ ವಕೀಲ ಪ್ರೀತಮ್ (advocate Preetham) ಎನ್ನುವರವ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದು ಖಂಡನೀಯ ಅದಕ್ಕಾಗಿ ಅಲ್ಲಿಯ ಪೊಲೀಸ್ ವರಿಷ್ಠಾಧಿಕಾರಿ (Chikmagalur SP) ತಪ್ಪಿತಸ್ಥರ ವಿರುದ್ಧ ಕ್ರಮ ಕೂಡ ಜರುಗಿಸಿದ್ದಾರೆ. ಅದ್ಯಾಗ್ಯೂ ಇಂದು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಶುರುವಾಗಿರುವಾಗಲೇ ವಕೀಲರು ಕೋರ್ಟ್ ಕಲಾಪ ಬಹಿಷ್ಕರಿಸಿ ಚೆನ್ನಮ್ಮ ವೃತ್ತಕ್ಕೆ ಬಂದು ಮಾನವ ಸರಪಳಿ ನಿರ್ಮಿಸಿ ಸುವರ್ಣ ಸೌಧ ಕಡೆ ಹೋಗುವ ರಸ್ತೆಯನ್ನು ಬ್ಲಾಕ್ ಮಾಡಿದ್ದಾರೆ. ಯಾವುದೋ ತುರ್ತು ಕಾರ್ಯದ ನಿಮಿತ್ತ ಆ ರಸ್ತೆಗೆ ದ್ವಿಚಕ್ರ ವಾಹನದಲ್ಲಿ ಬರುವ ಯುವಕನೊಬ್ಬನನ್ನು ವಕೀಲರು ಅಡ್ಡಗಟ್ಟಿ ಹೆಕ್ಲ್ ಮಾಡುತ್ತಾರೆ. ವಕೀಲರಿಗೆ ಪ್ರತಿಭಟನೆ ನಡೆಸುವ ಹಕ್ಕಿದೆ ಅದನ್ನು ಯಾರೂ ಅಲ್ಲಗಳೆಯುವಂತಿಲ್ಲ, ಆದರೆ ರಸ್ತೆ ಮೇಲೆ ಓಡಾಡುವ ಜನರಿಗೆ ತೊಂದರೆ ನೀಡುವ ಅಧಿಕಾರ ಅವರಿಗೆ ಸರ್ವಥಾ ಇಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ