ಲಕ್ಷ್ಮಣ ಸವದಿ ಪಕ್ಷ ಬಿಟ್ಟಿರಬಹುದು ಆದರೆ ನನ್ನೊಂದಿಗಿನ ಸ್ನೇಹ ಬಿಟ್ಟಿಲ್ಲ, ತಪ್ಪಿನ ಅರಿವಾದಾಗ ವಾಪಸ್ಸಾಗುತ್ತಾರೆ: ಸಿಟಿ ರವಿ, ಬಿಜೆಪಿ ನಾಯಕ

ಲಕ್ಷ್ಮಣ ಸವದಿ ಪಕ್ಷ ಬಿಟ್ಟಿರಬಹುದು ಆದರೆ ನನ್ನೊಂದಿಗಿನ ಸ್ನೇಹ ಬಿಟ್ಟಿಲ್ಲ, ತಪ್ಪಿನ ಅರಿವಾದಾಗ ವಾಪಸ್ಸಾಗುತ್ತಾರೆ: ಸಿಟಿ ರವಿ, ಬಿಜೆಪಿ ನಾಯಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 27, 2024 | 2:36 PM

ನಿನ್ನೆ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಶೆಟ್ಟರ್ ಆಡಿದ ಮಾತು ನಿಮಗೆ ನೆನಪಿರಬಹುದು. ಬಿಜೆಪಿಗೆ ವಾಪಸ್ಸು ಹೋಗುವ ಪ್ರಕ್ರಿಯೆ 5-6 ತಿಂಗಳುಗಳಿಂದ ನಡೆಯುತ್ತಿತ್ತು ಅಂತ ಅವರು ಹೇಳಿದ್ದರು. ಅದರರ್ಥ ಸ್ಪಷ್ಟ, ಪಕ್ಷ ಬಿಟ್ಟುಹೋದವರನ್ನು ಓಲೈಸಲು ರಾಜ್ಯ ಬಿಜೆಪಿ ನಾಯಕರಿಂದ ಪ್ರಯತ್ನಗಳು ನಡೆಯುತ್ತಲೇ ಇವೆ.

ಬೆಂಗಳೂರು: ರಾಜ್ಯ ಬಿಜೆಪಿ ನಾಯಕರು ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿರುವ ಮತ್ತೊಬ್ಬ ನಾಯಕ ಮತ್ತು ಅಥಣಿ ಶಾಸಕ ಲಕ್ಷ್ಮಣ ಸವದಿಯವರನ್ನು (Laxman Savadi) ವಾಪಸ್ಸು ಕರೆದೊಯ್ಯುವ ಪ್ರಯತ್ನದಲ್ಲಿರೋದು ಕ್ರಮೇಣ ಸ್ಪಷ್ಟವಾಗುತ್ತಿದೆ. ಬಿಜೆಪಿಯ ಹಲವಾರು ನಾಯಕರು ಅವರ ಸಂಪರ್ಕದಲ್ಲಿರೋದು ಎರಡು ಮೂರು ದಿನಗಳಿಂದ ಅಂದರೆ ಜಗದೀಶ್ ಶೆಟ್ಟರ್ (Jagadish Shettar) ಕಾಂಗ್ರೆಸ್ ತೊರೆದು ಬಿಜೆಪಿಗೆ ವಾಪಸ್ಸು ಹೋದ ದಿನದಿಂದ ಬೆಳಕಿಗೆ ಬರುತ್ತಿದೆ. ಇಂದು ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಸಿಟಿ ರವಿ (CT Ravi) ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಸವದಿ ಬಗ್ಗೆ ಹೇಳಿದ್ದನ್ನು ಕೇಳಿಸಿಕೊಂಡರೆ ಮೇಲಿನ ಅಂಶ ಸ್ಪಷ್ಟವಾಗುತ್ತದೆ. ಲಕ್ಷ್ಮಣ ಸವದಿ ಪಕ್ಷ ಬಿಟ್ಟಿರಬಹುದು ಆದರೆ ತನ್ನೊಂದಿಗೆ ಸ್ನೇಹ ಬಿಟ್ಟಿಲ್ಲ ಎಂದು ರವಿ ಹೇಳುತ್ತಾರೆ.

ಇದಕ್ಕೂ ಮೊದಲು ರವಿ ಯಾವತ್ತೂ ಲಕ್ಷ್ಮಣ ಅವರಾಗಲೀ ಶೆಟ್ಟರ್ ಅವರಾಗಲೀ ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆಂದು ಹೇಳಿರಲಿಲ್ಲ. ನಿನ್ನೆ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಶೆಟ್ಟರ್ ಆಡಿದ ಮಾತು ನಿಮಗೆ ನೆನಪಿರಬಹುದು. ಬಿಜೆಪಿಗೆ ವಾಪಸ್ಸು ಹೋಗುವ ಪ್ರಕ್ರಿಯೆ 5-6 ತಿಂಗಳುಗಳಿಂದ ನಡೆಯುತ್ತಿತ್ತು ಅಂತ ಅವರು ಹೇಳಿದ್ದರು. ಅದರರ್ಥ ಸ್ಪಷ್ಟ, ಪಕ್ಷ ಬಿಟ್ಟುಹೋದವರನ್ನು ಓಲೈಸಲು ರಾಜ್ಯ ಬಿಜೆಪಿ ನಾಯಕರಿಂದ ಪ್ರಯತ್ನಗಳು ನಡೆಯುತ್ತಲೇ ಇವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ