ಪಿಎಸ್ಐ ಅಮಾನತ್ತಿಗೆ ಆಗ್ರಹಿಸಿ ಲಕ್ಷ್ಮೇಶ್ವರ ಬಂದ್, ಶ್ರೀರಾಮಸೇನೆ, ಗೋಸಾವಿ ಸಮಾಜದ ಪ್ರತಿಭಟನೆ!
ಪೊಲೀಸ್ ಇನ್ಸ್ಪೆಕ್ಟರ್ ಈರಪ್ಪ ರಿತ್ತಿ ವಿನಾಕಾರಣ ಗೋಸಾವಿ ಸಮಾಜದ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ, ಅವರನ್ನು ಕೂಡಲೇ ಅಮಾನತ್ತು ಮಾಡಬೇಕೆಂದು ಶ್ರೀರಾಮಸೇನೆ ಹೇಳಿಕೆಯೊಂದನ್ನು ನೀಡಿದೆ. ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿರುವರೆಂದು ನಮ್ಮ ವರದಿಗಾರ ಹೇಳುತ್ತಾರೆ.
ಗದಗ: ಅಕ್ಟೋಬರ್ 12 ರಂದು ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ದಸರಾ ಮೆರವಣಿಗೆ ಸಾಗುತ್ತಿದ್ದಾಗ ಎರಡು ಗುಂಪುಗಳ ನಡುವೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್ಪೆಕ್ಟರ್ ಈರಪ್ಪ ರಿತ್ತಿ ಎನ್ನುವವರು ಏಕಪಕ್ಷೀಯ ಧೋರಣೆ ತಳೆದು ಗೋಸಾವಿ ಸಮುದಾಯದ ಯುವಕರ ಮೇಲೆ ಹಲ್ಲೆ ನಡೆಸಿದನ್ನು ಖಂಡಿಸಿ ಶ್ರೀರಾಮ ಸೇನೆ ಮತ್ತು ಗೋಸಾವಿ ಸಮಾಜ ನೀಡಿದ ಬಂದ್ ಕರೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪಟ್ಟಣದ ಮುಖ್ಯ ಮಾರ್ಕೆಟ್ ನಲ್ಲಿ ಅಂಗಡಿಗಳೆಲ್ಲ ಬಂದ್ ಆಗಿವೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಚಿಕ್ಕೋಡಿ: ದುರ್ಗಾದೇವಿ ಮೂರ್ತಿ ವಿಸರ್ಜನೆ ಬಳಿಕ ಎರಡು ಕೋಮಿನ ನಡುವೆ ಗಲಾಟೆ, ಲಾಠಿ ಚಾರ್ಜ್
Latest Videos