55 ಲಕ್ಷ ರೂ. ವೆಚ್ಚದಲ್ಲಿ ಲೀಲಾವತಿ ಸ್ಮಾರಕ; ಗುದ್ದಲಿ ಪೂಜೆ ನೆರವೇರಿಸಿದ ವಿನೋದ್​ ರಾಜ್​ ಕುಟುಂಬ

|

Updated on: Jan 14, 2024 | 1:32 PM

ಲೀಲಾವತಿ ಸ್ಮಾರಕ ಹೇಗಿರಲಿದೆ ಎಂಬುದನ್ನು ತಿಳಿಸುವಂತಹ ಪ್ರತಿಕೃತಿಯ ಎದುರಿನಲ್ಲಿ ಪೂಜೆ ಮಾಡಲಾಗಿದೆ. ತೋಟದ ಪಕ್ಕದಲ್ಲಿ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ವಿನೋದ್​ ರಾಜ್​, ಪತ್ನಿ ಅನು ಹಾಗೂ ಪುತ್ರ ಯುವರಾಜ್​ ಈ ಪೂಜೆಯಲ್ಲಿ ಭಾಗಿ ಆಗಿದ್ದಾರೆ. 55 ಲಕ್ಷ ರೂಪಾಯಿ ವೆಚ್ಚದಲ್ಲಿ ಲೀಲಾವತಿ ಅವರ ಸ್ಮಾರಕ ನಿರ್ಮಾಣ ಆಗಲಿದೆ.

ಕಳೆದ ವರ್ಷ ಡಿಸೆಂಬರ್​ 8ರಂದು ಹಿರಿಯ ನಟಿ ಲೀಲಾವತಿ (Leelavathi) ಅವರು ನಿಧನರಾದರು. ಈಗ ಅವರ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಸಂಕ್ರಾಂತಿ ಹಬ್ಬದ ಬಳಿಕ ಸ್ಮಾರಕ ನಿರ್ಮಾಣ ಕಾರ್ಯ ಆರಂಭಿಸುವುದಾಗಿ ಪುತ್ರ ವಿನೋದ್​ ರಾಜ್​ (Vinod Raj) ಹೇಳಿದ್ದರು. ಇಂದು (ಜನವರಿ 14) ಅವರು ತೋಟದ ಪಕ್ಕದಲ್ಲಿ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಸ್ಮಾರಕ ಹೇಗಿರಲಿದೆ ಎಂಬುದನ್ನು ತಿಳಿಸುವಂತಹ ಪ್ರತಿಕೃತಿಯ ಎದುರಿನಲ್ಲಿ ಪೂಜೆ ಮಾಡಲಾಗಿದೆ. ವಿನೋದ್​ ರಾಜ್​, ಪತ್ನಿ ಅನು ಹಾಗೂ ಪುತ್ರ ಯುವರಾಜ್​ ಅವರು ಪೂಜೆಯಲ್ಲಿ ಭಾಗಿ ಆಗಿದ್ದಾರೆ. 55 ಲಕ್ಷ ರೂಪಾಯಿ ವೆಚ್ಚದಲ್ಲಿ ಲೀಲಾವತಿ ಸ್ಮಾರಕ (Leelavathi Smaraka) ನಿರ್ಮಾಣ ಆಗಲಿದೆ. 120 ದಿನದಲ್ಲಿ ಈ ಕೆಲಸ ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ