AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೀಲಾವತಿ ಅವರನ್ನು ನೋಡಿಕೊಳ್ಳುತ್ತಿದ್ದ ಮಹಿಳೆ ನಿಧನ; ಅಂತಿಮ ದರ್ಶನ ಪಡೆದ ವಿನೋದ್ ರಾಜ್

ಕ್ಯಾನ್ಸರ್​ಗೆ ಒಳಗಾಗಿದ್ದ ಬಂಗಾರಮ್ಮ ಅವರನ್ನು ವಿನೋದ್ ರಾಜ್ ಅವರು ನೋಡಿಕೊಳ್ಳುತ್ತಿದ್ದರು. ಅವರಿಗಾಗಿಯೇ ಓರ್ವ ನರ್ಸ್ ನೇಮಿಸಿ, ಆರೈಕೆ ಮಾಡುತ್ತಿದ್ದರು. ಮೈಲನಹಳ್ಳಿ ತೋಟದಲ್ಲಿ ಸುಮಾರು 25 ವರ್ಷಗಳಿಂದ ಲೀಲಾವತಿ ಅವರ ಜೊತೆಗಿದ್ದ ಬಂಗಾರಮ್ಮ ಅವರು ಈಗ ಕೊನೆಯುಸಿರು ಎಳೆದಿದ್ದಾರೆ.

ಲೀಲಾವತಿ ಅವರನ್ನು ನೋಡಿಕೊಳ್ಳುತ್ತಿದ್ದ ಮಹಿಳೆ ನಿಧನ; ಅಂತಿಮ ದರ್ಶನ ಪಡೆದ ವಿನೋದ್ ರಾಜ್
ವಿನೋದ್​ ರಾಜ್​, ಲೀಲಾವತಿ, ಬಂಗಾರಮ್ಮ
Mangala RR
| Edited By: |

Updated on:Dec 13, 2023 | 3:22 PM

Share

ಕನ್ನಡ ಚಿತ್ರರಂಗದ ಖ್ಯಾತ ನಟಿ ಲೀಲಾವತಿ (Leelavathi) ಅವರ ನಿಧನದ ನೋವು ಹಸಿಯಾಗಿರುವಾಗಲೇ ಮತ್ತೊಂದು ಕಹಿ ಸುದ್ದಿ ಕೇಳಿಬಂದಿದೆ. ಲೀಲಾವತಿ ಅವರನ್ನು ನೋಡಿಕೊಳ್ಳುತ್ತಿದ್ದ ಮಹಿಳೆ ಕೂಡ ಈಗ ಇಹಲೋಕ ತ್ಯಜಿಸಿದ್ದಾರೆ. ಇದು ವಿನೋದ್​ ರಾಜ್​ (Vinod Raj) ಅವರ ಕುಟುಂಬಕ್ಕೆ ಇನ್ನಷ್ಟು ನೋವು ಉಂಟುಮಾಡಿದೆ. ಮೃತ ಮಹಿಳೆಯ ಹೆಸರು ಬಂಗಾರಮ್ಮ (Bangaramma). ಚಿಕ್ಕ ವಯಸ್ಸಿನಿಂದಲೂ ಅವರು ಲೀಲಾವತಿ ಜೊತೆ ಇದ್ದರು. ಈಗ ಅವರು ಕೊನೆಯುಸಿರು ಎಳೆದಿದ್ದಾರೆ.

ಬಂಗಾರಮ್ಮ ಅವರಿಗೆ 65 ವರ್ಷ ವಯಸ್ಸಾಗಿತ್ತು. ಲೀಲಾವತಿ ಅವರು ಚೆನೈನಲ್ಲಿ ವಾಸವಾಗಿದ್ದಾಗಿನಿಂದಲೂ ಅವರ ಜೊತೆ ಬಂಗಾರಮ್ಮ ಇದ್ದರು. ಲೀಲಾವತಿ ಎಲ್ಲಿಗೇ ಹೋದರೂ ಕೂಡ ಅವರ ಜೊತೆ ಬಂಗಾರಮ್ಮ ಇರುತ್ತಿದ್ದರು. ಅವರಿಗೆ ಇತ್ತೀಚೆಗೆ ಅನಾರೋಗ್ಯ ಉಂಟಾಗಿತ್ತು. ಬಂಗಾರಮ್ಮ ಅವರು ಕ್ಯಾನ್ಸರ್​ನಿಂದ ಬಳಲುತ್ತಿದ್ದರು ಎಂಬ ಮಾಹಿತಿ ಇದೆ.

ಇದನ್ನೂ ಓದಿ: ಹಾಲು-ತುಪ್ಪ ಕಾರ್ಯ ನೆರವೇರಿಸಿದ ಲೀಲಾವತಿ ಕುಟುಂಬ

ಕ್ಯಾನ್ಸರ್​ಗೆ ಒಳಗಾಗಿದ್ದ ಬಂಗಾರಮ್ಮ ಅವರನ್ನು ವಿನೋದ್ ರಾಜ್ ಅವರು ನೋಡಿಕೊಳ್ಳುತ್ತಿದ್ದರು. ಅವರಿಗಾಗಿಯೇ ಓರ್ವ ನರ್ಸ್ ನೇಮಿಸಿ, ಆರೈಕೆ ಮಾಡುತ್ತಿದ್ದರು. ಮೈಲನಹಳ್ಳಿ ತೋಟದಲ್ಲಿ ಸುಮಾರು 25 ವರ್ಷಗಳಿಂದ ಲೀಲಾವತಿ ಅವರ ಜೊತೆಗಿದ್ದ ಬಂಗಾರಮ್ಮ ಅವರು ಮಂಗಳವಾರ (ಡಿಸೆಂಬರ್​ 12) ರಾತ್ರಿ ನಾಗರಭಾವಿ ಸಮೀಪ ಇರುವ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ. ಸೋಲದೇವನಹಳ್ಳಿ ತೋಟದಲ್ಲಿ ವಿನೋದ್ ರಾಜ್ ಅಂತಿಮ ದರ್ಶನ ಪಡೆದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:16 pm, Wed, 13 December 23

Follow Us
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ