ಕೊನೆಯ 2 ಎಸೆತಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮ್ಯಾಟ್ ಮಿಲ್ನ್ಸ್
ಅಲ್ಲದೆ ಯಾರ್ಕ್ಶೈರ್ ತಂಡಕ್ಕೆ ಗೆಲ್ಲಲು ಕೊನೆಯ ಮೂರು ಎಸೆತಗಳಲ್ಲಿ 11 ರನ್ಗಳ ಅವಶ್ಯಕತೆಯಿತ್ತು. ಇತ್ತ ಇಬ್ಬರು ಬೌಲರ್ಗಳು ಕ್ರೀಸ್ನಲ್ಲಿದ್ದರಿಂದ ಲೀಸೆಸ್ಟರ್‌ಶೈರ್ ತಂಡ ಗೆಲ್ಲೋದು ಖಚಿತ ಎಂದೇ ಎಲ್ಲರೂ ಭಾವಿಸಿದ್ದರು. ಇದನ್ನು ಪುಷ್ಠೀಕರಿಸುವಂತೆ ಜೋಶ್ ಹಲ್ 19ನೇ ಓವರ್ನ 4ನೇ ಎಸೆತದಲ್ಲಿ ನೀಡಿದ್ದು ಕೇವಲ 1 ರನ್ ಮಾತ್ರ.
ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್ ನಾರ್ತ್ ಗ್ರೂಪ್ ಪಂದ್ಯದಲ್ಲಿ ರಣರೋಚಕ ಹೋರಾಟ ಕಂಡು ಬಂದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲೀಸೆಸ್ಟರ್‌ಶೈರ್ ತಂಡವು 18.5 ಓವರ್ಗಳಲ್ಲಿ 185 ರನ್ಗಳಿಸಿ ಆಲೌಟ್ ಆಯಿತು. 186 ರನ್ಗಳ ಗುರಿ ಪಡೆದ ಯಾರ್ಕ್ಶೈರ್ ತಂಡ 175 ರನ್ಗಳಿಗೆ 8 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು.
ಅಲ್ಲದೆ ಯಾರ್ಕ್ಶೈರ್ ತಂಡಕ್ಕೆ ಗೆಲ್ಲಲು ಕೊನೆಯ ಮೂರು ಎಸೆತಗಳಲ್ಲಿ 11 ರನ್ಗಳ ಅವಶ್ಯಕತೆಯಿತ್ತು. ಇತ್ತ ಇಬ್ಬರು ಬೌಲರ್ಗಳು ಕ್ರೀಸ್ನಲ್ಲಿದ್ದರಿಂದ ಲೀಸೆಸ್ಟರ್‌ಶೈರ್ ತಂಡ ಗೆಲ್ಲೋದು ಖಚಿತ ಎಂದೇ ಎಲ್ಲರೂ ಭಾವಿಸಿದ್ದರು. ಇದನ್ನು ಪುಷ್ಠೀಕರಿಸುವಂತೆ ಜೋಶ್ ಹಲ್ 19ನೇ ಓವರ್ನ 4ನೇ ಎಸೆತದಲ್ಲಿ ನೀಡಿದ್ದು ಕೇವಲ 1 ರನ್ ಮಾತ್ರ.
ಅಂತಿಮ ಎರಡು ಎಸೆತಗಳಲ್ಲಿ 10 ರನ್ಗಳು ಬೇಕಿತ್ತು. ಈ ವೇಳೆ ಸ್ಟ್ರೈಕ್ಗೆ ಆಗಮಿಸಿದ ಮ್ಯಾಟ್ ಮಿಲ್ನ್ಸ್ಭರ್ಜರಿ ಸಿಕ್ಸ್ ಸಿಡಿಸಿದರು. ಕೊನೆಯ ಎಸೆತದಲ್ಲಿ 4 ರನ್ಗಳು ಬೇಕಿತ್ತು. ಈ ವೇಳೆ ಸ್ಕೂಪ್ ಶಾಟ್ನೊಂದಿಗೆ ಸಿಕ್ಸ್ ಸಿಡಿಸುವ ಮೂಲಕ ಮ್ಯಾಟ್ ಮಿಲ್ನ್ಸ್ ಯಾರ್ಕ್ಶೈರ್ ತಂಡಕ್ಕೆ 2 ವಿಕೆಟ್ಗಳ ರೋಚಕ ಜಯ ತಂದುಕೊಟ್ಟರು. ಇದೀಗ ಮ್ಯಾಟ್ ಮಿಲ್ನ್ಸ್ ಅವರ ಕೊನೆಯ ಸಿಕ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.