ಮನೆಗೆ ನುಗ್ಗಿದ ಚಿರತೆಯಿಂದ ನಾಯಿಯ ಮೇಲೆ ಅಟ್ಯಾಕ್; ಶಾಕಿಂಗ್ ವಿಡಿಯೋ ವೈರಲ್
ಚಿರತೆಯೊಂದು ಮನೆಯಲ್ಲಿದ್ದ ಕಪ್ಪು ಲ್ಯಾಬ್ರಡಾರ್ ನಾಯಿಯ ಮೇಲೆ ದಾಳಿ ನಡೆಸಿರುವ ವಿಡಿಯೋ ವೈರಲ್ ಆಗಿದೆ. ಈ ವೇಳೆ ಮಹಿಳೆಯೊಬ್ಬರು ಮನೆಯ ಒಳಗಿನಿಂದ ಕಿರುಚಾಡುತ್ತಾ ಬಂದಿದ್ದಾರೆ. ಆಗ ಚಿರತೆ ತನ್ನ ಹಿಡಿತವನ್ನು ಸಡಿಲಗೊಳಿಸಿತು. ಗಾಯಗೊಂಡ ಲ್ಯಾಬ್ರಡಾರ್ ಚಿರತೆಯ ಮೇಲೆ ಹಾರಲು ನೋಡಿತು. ತಕ್ಷಣ ಆ ಮಹಿಳೆ ನಾಯಿಯನ್ನು ಮನೆಯೊಳಗೆ ಎಳೆದುಕೊಂಡು ಬಾಗಿಲು ಹಾಕಿದ್ದಾರೆ.
ಚಿರತೆಯೊಂದು ಸಾಕು ನಾಯಿಯ ಮೇಲೆ ದಾಳಿ ಮಾಡಿದ ಆಘಾತಕಾರಿ ಘಟನೆಯ ಕ್ಷಣದ ಸಿಸಿಟಿವಿ ದೃಶ್ಯಾವಳಿಗಳು ಎಲ್ಲೆಡೆ ವೈರಲ್ ಆಗಿದೆ. ಕಪ್ಪು ಲ್ಯಾಬ್ರಡಾರ್ ನಾಯಿ ಹಾಗೂ ಚಿರತೆಯ ನಡುವಿನ ಫೈಟಿಂಗ್ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದೆ. ಈ ವಿಡಿಯೋದಲ್ಲಿ ಚಿರತೆಯೊಂದು ಮನೆಯ ಸಿಟೌಟ್ನಲ್ಲಿ ಆಕಸ್ಮಿಕವಾಗಿ ನಡೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು. ಆಗ ಅಲ್ಲಿದ್ದ ನಾಯಿಯ ಕುತ್ತಿಗೆಗೆ ಬಾಯಿ ಹಾಕಿದ ಚಿರತೆ ನಾಯಿಯ ಕುತ್ತಿಗೆಯನ್ನು ಹಿಡಿದು ದಾಳಿ ಮಾಡಿದೆ. ಆ ಚಿರತೆಯಿಂದ ತಪ್ಪಿಸಿಕೊಳ್ಳಲು ನಾಯಿ ಪರದಾಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos