Video: ಮದುವೆಗೆ ಕರೆಯದೇ ಬಂದ ಅತಿಥಿ, ಬಾಯಿಗೆ ಸಿಕ್ಕಿದ್ರೆ ಪಕ್ಕಾ ತಿಥಿ
ಮದುವೆ ಮನೆಗೆ ಚಿರತೆಯೊಂದು ನುಗ್ಗಿ ಆತಂಕ ಸೃಷ್ಟಿಸಿರುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಆಹ್ವಾನಿಸದ ಈ ಅತಿಥಿ ಮಂಟಪದ ಬಳಿ ಪ್ರವೇಶಿಸಿದಾಗ ಒಮ್ಮೆಲೆ ಎಲ್ಲರ ಹೃದಯ ಬಡಿತ ನಿಂತಂತಾಗಿತ್ತು. ನೂರಾರು ಮಂದಿ ಅಲ್ಲಿ ಸೇರಿದ್ದರು. ಎಷ್ಟೇ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಒಬ್ಬರಿಗಲ್ಲಾ ಒಬ್ಬರಿಗೆ ತೊಂದರೆ ಕಟ್ಟಿಟ್ಟಬುತ್ತಿ ಎಂಬುದು ತಿಳಿದಿತ್ತು. ಕೂಡಲೇ ಅಲ್ಲಿದ್ದವರು ಪೊಲೀಸರಿಗೆ ಕರೆ ಮಾಡಿದ್ದರು.

ಅವರು ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿ ಕೂಡಲೇ ಸ್ಥಳಕ್ಕೆ ಧಾವಿಸಿದ್ದರು. ಚಿರತೆ ದಾಳಿಗೆ ಅರಣ್ಯ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ. ಸ್ಥಳೀಯ ನಿವಾಸಿ ದೀಪಕ್ ಕುಮಾರ್ ಅವರ ಸಹೋದರಿಯ ವಿವಾಹ ಇದಾಗಿತ್ತು. ಅರಣ್ಯ ಇಲಾಖೆಯು ಚಿರತೆಯನ್ನು ಸೆರೆ ಹಿಡಿದು ಕಾರ್ಯಾಚರಣೆ ಆರಂಭಿಸಿತ್ತು.
ಅತಿಥಿಗಳು ಮೊದಲು ನಾಯಿ ಅಂದುಕೊಂಡಿದ್ದರು. ಅರಣ್ಯ ಸಿಬ್ಬಂದಿ ಬಂದಾಗ ಅದು ಎರಡನೇ ಮಹಡಿಗೆ ತೆರಳಿ ಪೀಠೋಪಕರಣಗಳಡಿ ಅಡಗಿಕೊಂಡಿತ್ತು. ಅರಣ್ಯ ಸಿಬ್ಬಂದಿ ಹಿಡಿಯಲು ಹೋದಾಗ ದಾಳಿ ಮಾಡಿ ಕೈಗೆ ಕಚ್ಚಿತ್ತು. ಕೂಡಲೇ ಪ್ರಥಮ ಚಿಕಿತ್ಸೆ ನೀಡಿ ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಯಿತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ