ಹೊಸ ಕಾಂಗ್ರೆಸ್ ಭವನ ನಿರ್ಮಾಣದ ಹಿನ್ನೆಲೆಯಲ್ಲಿ ಎಐಸಿಸಿಯನ್ನು ಪುನಾರಚನೆ ಮಾಡುವ ಆಸೆ ಖರ್ಗೆಗಿದೆ: ಪರಮೇಶ್ವರ್
ದೆಹಲಿಯಲ್ಲಿ ಹೊಸ ಕಾಂಗ್ರೆಸ್ ಭವನದ ಉದ್ಘಾಟನೆಯಾದ ಮೇಲೆ ಎಐಸಿಸಿಯನ್ನು ಪುನಾರಚನೆ ಮಾಡುವ ಆಸೆಯನ್ನು ಮಲ್ಲಿಕಾರ್ಜುನ ಖರ್ಗೆಯವರು ಇಟ್ಟುಕೊಂಡಿದ್ದಾರೆ, ಬಹಳಷ್ಟು ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತಿರುವುದರಿಂದ ಪಕ್ಷ ಸಂಘಟನೆಯ ಅವಶ್ಯಕತೆಯಿದೆ ಎಂದು ಅವರು ಭಾವಿಸಿದ್ದಾರೆ, ಹಾಗಾಗೇ ರಾಜ್ಯಾಧ್ಯಕ್ಷರಗಳ ನೇಮಕದ ಬಗ್ಗೆ ಮಾತಾಡಿರಬಹುದು ಎಂದು ಪರಮೇಶ್ವರ್ ಹೇಳಿದರು.
ಬೆಂಗಳೂರು: ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತಾಡಿದ ಗೃಹ ಸಚಿವ ಜಿ ಪರಮೇಶ್ವರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಬಗ್ಗೆ ಏನು ಹೇಳಿದ್ದಾರೋ ಗೊತ್ತಿಲ್ಲ ಮತ್ತು ಅವರು ಹೇಳಿರಬಹುದಾದ ವಿಷಯಗಳಿಗೆ ಪ್ರತಿಕ್ರಿಯಿಸುವ ಗೋಜಿಗೂ ತಾನು ಹೋಗೋದಿಲ್ಲ ಎಂದು ಹೇಳಿದರು. ಹೈಕಮಾಂಡ್ ಮಟ್ಟದ ಮಾತುಕತೆಯಲ್ಲಿ ರಾಜ್ಯದ ನಾಯಕರು ಭಾಗಿಯಾಗುವುದಿಲ್ಲ, ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಗಳಿಗೆ ಎಲ್ಲರೂ ಬದ್ಧರಾಗಿರಬೇಕಾಗುತ್ತದೆ ಎಂದು ಪರಮೇಶ್ವರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ