Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈದರಾಬಾದ್​​ನಲ್ಲೂ ರಿಲೀಸ್ ಆಗುತ್ತಿದೆ ‘ನನ್ನ ಪ್ರೀತಿಯ ರಾಮು’ ಸಿನಿಮಾ

ಹೈದರಾಬಾದ್​​ನಲ್ಲೂ ರಿಲೀಸ್ ಆಗುತ್ತಿದೆ ‘ನನ್ನ ಪ್ರೀತಿಯ ರಾಮು’ ಸಿನಿಮಾ

Mangala RR
| Updated By: ರಾಜೇಶ್ ದುಗ್ಗುಮನೆ

Updated on: Feb 13, 2025 | 8:49 AM

ಹೈದರಾಬಾದ್​ನಲ್ಲಿ ‘ನನ್ನ ಪ್ರೀತಿಯ ರಾಮು’ ಸಿನಿಮಾ ರೀ ರಿಲೀಸ್ ಆಗುತ್ತಿದೆ ಎಂಬ ವಿಚಾರ ರಿವೀಲ್ ಆಗಿದೆ. ಇದನ್ನು ಕೇಳಿ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ. ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿ ಎಂದು ಫ್ಯಾನ್ಸ್ ಅಭಿಪ್ರಾಯಪಡುತ್ತಿದ್ದಾರೆ. ಕರ್ನಾಟಕದಲ್ಲಿ ಸಿನಿಮಾ 130 ಥಿಯೇಟರ್​​ನಲ್ಲಿ ರಿಲೀಸ್ ಆಗುತ್ತಿದೆ.

‘ನನ್ನ ಪ್ರೀತಿಯ ರಾಮು’ ಸಿನಿಮಾ ಫೆಬ್ರವರಿ 14ರಂದು ರೀ ರಿಲೀಸ್ ಆಗುತ್ತಿದೆ. ಕರ್ನಾಟಕ ಮಾತ್ರವಲ್ಲದೆ, ಹೈದರಾಬಾದ್​ನಲ್ಲೂ ಸಿನಿಮಾ ಬಿಡುಗಡೆ ಕಾಣಲಿದೆ. ‘100 ಥಿಯೇಟರ್ ಪಕ್ಕಾ ಆಗಿದೆ. ಇನ್ನೂ 30 ಥಿಯೇಟರ್​​ ಸೇರ್ಪಡೆ ಆಗುವ ನಿರೀಕ್ಷೆ ಇದೆ. ಹಳ್ಳಿಗಳಿಂದಲೂ ಕರೆ ಬರುತ್ತಿದೆ. ಹೈದರಾಬಾದ್​ನ ಮೂರು ಥಿಯೇಟರ್​​ಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ’ ಎಂದು ವಿತರಕರು ಮಾಹಿತಿ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.