ಆಹಾರ ಅರಸಿ ಬಂದ ಚಿರತೆ, ಕೋಳಿ ಫಾರಂನಲ್ಲಿ ಲಾಕ್: ಅರವಳಿಕೆ ಮದ್ದು ನೀಡಿ ಸೆರೆ ಹಿಡಿದ ಅರಣ್ಯ ಅಧಿಕಾರಿಗಳು

ಮಹೇಶ್ ಇ, ಭೂಮನಹಳ್ಳಿ Edited By:

Updated on: Sep 01, 2023 | 3:03 PM

ಆಹಾರ ಅರಸಿ ಬಂದ ನಾಲ್ಕು ವರ್ಷದ ಚಿರತೆಯೊಂದು ಕೋಳಿ ಫಾರಂನಲ್ಲಿ ಸೆರೆ​​ ಆಗಿದ್ದು, ಅರವಳಿಕೆ ಮದ್ದು ನೀಡಿ ಅರಣ್ಯ ಅಧಿಕಾರಿಗಳು ಚಿರತೆ ಸೆರೆ ಹಿಡಿದಿರುವಂತಹ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಚೌಡನಕುಪ್ಪೆಯಲ್ಲಿ ಘಟನೆ ನಡೆದಿದೆ. ಮರಿಗೌಡಯ್ಯ ಎಂಬುವರಿಗೆ ಕೋಳಿ ಫಾರಂ ಸೇರಿದೆ.

ತುಮಕೂರು, ಸೆಪ್ಟೆಂಬರ್​ 1: ಆಹಾರ ಅರಸಿ ಬಂದ ನಾಲ್ಕು ವರ್ಷದ ಚಿರತೆಯೊಂದು (Leopard) ಕೋಳಿ ಫಾರಂನಲ್ಲಿ ಲಾಕ್​​ ಆಗಿದ್ದು, ಅರವಳಿಕೆ ಮದ್ದು ನೀಡಿ ಅರಣ್ಯ ಅಧಿಕಾರಿಗಳು ಚಿರತೆ ಸೆರೆ ಹಿಡಿದಿದ್ದಾರೆ. ಜಿಲ್ಲೆಯ ಕುಣಿಗಲ್ ತಾಲ್ಲೂಕಿನ  ಚೌಡನಕುಪ್ಪೆಯಲ್ಲಿ ಘಟನೆ ನಡೆದಿದೆ. ಮರಿಗೌಡಯ್ಯ ಎಂಬುವರಿಗೆ ಕೋಳಿ ಫಾರಂ ಸೇರಿದೆ. ಇಂದು ಬೆಳಗ್ಗೆ ಆಹಾರ ಅರಸಿ ಬಂದಿದ್ದು, ಮತ್ತೆ ವಾಪಸ್ ಹೋಗಲು ದಾರಿ ತಿಳಿಯದೇ ಸೆರೆ ಆಗಿದೆ. ಚಿರತೆ ಕಂಡು ಗಾಬರಿಯಾದ ಕೋಳಿ ಫಾರಂ‌ ಸಿಬ್ಬಂದಿಗಳು, ಕೂಡಲೇ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅರವಳಿಕೆ ತಜ್ಞರು ಹಾಗೂ ಸಹಾಯಕ ನಿರ್ದೇಶಕರಾದ ಡಾ. ಕೆ.ಎಸ್ ಉಮಾಶಂಕರ್​ರಿಂದ ಚಿರತೆಗೆ ಅರವಳಿಕೆ ಮದ್ದು ನೀಡಿ ಅರಣ್ಯ ಅಧಿಕಾರಿಗಳು ರಕ್ಷಣೆ ಮಾಡಿದ್ದು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಚಿರತೆಯನ್ನು ತೆಗೆದುಕೊಂಡು ಹೋಗಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Sep 01, 2023 03:03 PM
Follow Us
Mahesha E

ಮಹೇಶ್ ಇ ಎಂಬ ನಾನು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಭೂಮನಹಳ್ಳಿ ಗ್ರಾಮದ ನಿವಾಸಿ. ನಮ್ಮ ಹೆಮ್ಮೆಯ ಟಿವಿ9 ತುಮಕೂರು ಜಿಲ್ಲಾ ವರದಿಗಾರನಾಗಿ ಸತತ 9 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನಡೆದಾಡುವ ದೇವರು ತ್ರಿವಿಧ ದಾಸೋಹಿ ಶಿವಕುಮಾರ್ ಶ್ರೀಗಳು ಲಿಂಗೈಕ್ಯರಾದಾಗ ಆ ಸುದ್ದಿ ಬಿತ್ತರ ಬಗ್ಗೆ ಹಾಗೂ ಕೊನೆ ಕ್ಷಣದಲ್ಲಿ ದೇವರ ಜೊತೆಯಿದ್ದ ಎಲ್ಲಾ ಕಾರ್ಯಕ್ರಮಗಳನ್ನ ನೋಡಿ ವರದಿ ಮಾಡಿದ್ದು ನನ್ನ ಭಾಗ್ಯ..ಬಡ ಕುಟುಂಬದಿಂದ ಬಂದಿರುವ ನನಗೆ ಟಿವಿ9 ಸಂಸ್ಥೆ ತುಮಕೂರು ಅಂತಾ ಅತಿದೊಡ್ಡ ಜಿಲ್ಲೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದ...