ಕೊಡಗು: ಅಪಘಾತ ಮಾಡಿದರೂ ಪರಿಹಾರ ನೀಡದ ಕೆಎಸ್ಆರ್ಟಿಸಿ; ಬಸ್ಸನ್ನೇ ಅಟ್ಯಾಚ್ ಮಾಡುವಂತೆ ವಾರಂಟ್ ಹೊರಡಿಸಿದ ನ್ಯಾಯಾಲಯ!
ಕೆಎಸ್ ಆರ್ ಟಿಸಿ ಕಾರಿನ ಮಾಲೀಕರಿಗೆ ಪರಿಹಾರ ನೀಡಬೇಕೆಂದು ಕೋರ್ಟ್ ತೀರ್ಪಿತ್ತರೂ, ಸಂಸ್ಥೆಯು ಹೈಕೋರ್ಟ್ ಗೆ ಅಪೀಲು ಹೋಗಿತ್ತು. ಉಚ್ಚ ನ್ಯಾಯಲಯದಿಂದ ಮನವಿ ತಿರಸ್ಕೃತಗೊಂಡ ನಂತರ ಸಹ ಸಾರಿಗೆ ಸಂಸ್ಥೆ ಪರಿಹಾರ ನೀಡದೆ ಸತಾಯಿಸುತ್ತಿದ್ದ ಕಾರಣ ಕಾರು ಮಾಲೀಕರು ಪುನಃ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅವರ ಮನವಿ ಆಲಿಸಿದ ಬಳಿಕ ಕೋರ್ಟ್ ಅಪಘಾತ ಮಾಡಿದ ಕಾರನ್ನು ಅಟ್ಯಾಚ್ ಮಾಡುವ ವಾರಂಟ್ ಹೊರಡಿಸಿದೆ
ಮಡಿಕೇರಿ: ಇದ್ಯಾಕೆ ಕೆಎಸ್ ಆರ್ ಟಿಸಿ ಬಸ್ಸು (KSRTC bus) ವಿರಾಜಪೇಟೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಮುಂದೆ ನಿಂತಿದೆ ಅಂತ ನೀವು ಯೋಚಿಸುತ್ತಿರಬಹುದು. ಅಸಲು ಸಂಗತಿಯೆಂದರೆ ವಿರಾಜಪೇಟೆಯಲ್ಲಿ ಸುಮಾರು 8-9 ವರ್ಷಗಳ ಹಿಂದೆ ವಿಡಿಯೋದಲ್ಲಿ ಕಾಣುತ್ತಿರುವ ಬಸ್ಸು ಕಾರೊಂದಕ್ಕೆ ಢಿಕ್ಕಿ ಹೊಡೆದಿತ್ತು. ಕಾರಿನ ಮಾಲೀಕರ ಪರ ಕೋರ್ಟ್ ನಲ್ಲಿ ವಾದಿಸಿದ ವಕೀಲರು ಹೇಳುವ ಪ್ರಕಾರ ಕಾರು ಸಂಪೂರ್ಣವಾಗಿ ಜಖಂಗೊಂಡಿತ್ತು. ಕೆಎಸ್ ಆರ್ ಟಿಸಿ ಕಾರಿನ ಮಾಲೀಕರಿಗೆ ಪರಿಹಾರ (compensation) ನೀಡಬೇಕೆಂದು ಕೋರ್ಟ್ ತೀರ್ಪಿತ್ತರೂ, ಸಂಸ್ಥೆಯು ಹೈಕೋರ್ಟ್ ಗೆ (high court) ಅಪೀಲು ಹೋಗಿತ್ತು. ಉಚ್ಚ ನ್ಯಾಯಲಯದಿಂದ ಮನವಿ ತಿರಸ್ಕೃತಗೊಂಡ ನಂತರ ಸಹ ಸಾರಿಗೆ ಸಂಸ್ಥೆ ಪರಿಹಾರ ನೀಡದೆ ಸತಾಯಿಸುತ್ತಿದ್ದ ಕಾರಣ ಕಾರು ಮಾಲೀಕರು ಪುನಃ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅವರ ಮನವಿ ಆಲಿಸಿದ ಬಳಿಕ ಕೋರ್ಟ್ ಅಪಘಾತ ಮಾಡಿದ ಕಾರನ್ನು ಅಟ್ಯಾಚ್ ಮಾಡುವ ವಾರಂಟ್ ಹೊರಡಿಸಿದೆ. ಹಾಗಾಗೇ ಬಸ್ಸನ್ನು ಕೋರ್ಟಿನ ಮುಂದೆ ತಂದು ನಿಲ್ಲಿಸಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ